alex Certify ಪೆಟ್ರೋಲ್‌ – ಡಿಸೇಲ್‌ ಬೆಲೆ ಏರಿಕೆ ಆತಂಕದಲ್ಲಿರುವವರಿಗೆ‌ ಇಲ್ಲಿದೆ ಭರ್ಜರಿ ʼಗುಡ್‌ ನ್ಯೂಸ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೆಟ್ರೋಲ್‌ – ಡಿಸೇಲ್‌ ಬೆಲೆ ಏರಿಕೆ ಆತಂಕದಲ್ಲಿರುವವರಿಗೆ‌ ಇಲ್ಲಿದೆ ಭರ್ಜರಿ ʼಗುಡ್‌ ನ್ಯೂಸ್ʼ

ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯೇರಿಕೆಯಿಂದ ಕಂಗೆಟ್ಟಿರುವ ವಾಹನ ಸವಾರರಿಗೆ ಕೇಂದ್ರ ಸರಕಾರವು ಶೀಘ್ರದಲ್ಲಿಯೇ ಸಿಹಿ ಸುದ್ದಿ ನೀಡಲಿದೆ. ಮುಂದಿನ ಆರು ತಿಂಗಳಲ್ಲಿ ವಾಹನ ಉತ್ಪಾದನಾ ಕಂಪನಿಗಳು ಫ್ಲೆಕ್ಸ್‌-ಫುಯೆಲ್‌ ವಾಹನಗಳನ್ನು ಉತ್ಪಾದಿಸಲಿವೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ಹೇಳಿರುವುದು ಇಂತಹ ಭರವಸೆಯನ್ನು ಮೂಡಿಸಿದೆ.

ಫ್ಲೆಕ್ಸ್‌ ಫುಯೆಲ್‌ ಅಥವಾ ಫ್ಲೆಕ್ಸಿಬಲ್‌ ಫುಯೆಲ್‌ ಎಂಬುದು ಪರ್ಯಾಯ ಇಂಧನವಾಗಿದ್ದು, ಗ್ಯಾಸೊಲಿನ್‌ ಹಾಗೂ ಮೆಥೆನಾಲ್‌ ಅಥವಾ ಎಥೆನಾಲ್‌ನ ಮಿಶ್ರಣವಾಗಿದೆ. ಇದನ್ನು ಪೆಟ್ರೋಲ್‌ಗೆ ಮಿಶ್ರಣ ಮಾಡಿದರೆ ಪೆಟ್ರೋಲ್‌ ಬೆಲೆ ಇಳಿಕೆಯಾಗಲಿದೆ ಎಂದೇ ಹೇಳಲಾಗುತ್ತಿದೆ. ಹಾಗಾಗಿ ನಿತಿನ್‌ ಗಡ್ಕರಿ ಅವರ ಹೇಳಿಕೆಯು ಪ್ರಾಮುಖ್ಯತೆ ಪಡೆದಿದೆ.

ಶೇ.100ರಷ್ಟು ಸ್ವಚ್ಛ ಇಂಧನ ಮೂಲಗಳಿಂದಲೇ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕಲ್ಪಿಸಲು ಕೇಂದ್ರ ಸರಕಾರ ಯೋಜನೆ ರೂಪಿಸಿದೆ. ಇತ್ತೀಚೆಗಷ್ಟೇ ಆಟೋಮೊಬೈಲ್‌ ಕ್ಷೇತ್ರದ ದಿಗ್ಗಜರೊಂದಿಗೆ ಸಭೆ ನಡೆಸಿದ್ದು, ಆರು ತಿಂಗಳಲ್ಲಿಯೇ ಫ್ಲೆಕ್ಸಿ ಫುಯೆಲ್‌ ವಾಹನಗಳ ಉತ್ಪಾದನೆ ಆರಂಭಿಸುವುದಾಗಿ ಭರವಸೆ ನೀಡಿದ್ದಾರೆ. ಸೊಸೈಟಿ ಆಫ್‌ ಇಂಡಿಯನ್‌ ಆಟೋಮೊಬೈಲ್‌ ಮ್ಯಾನುಫ್ಯಾಕ್ಚುರರ್ಸ್‌ (ಎಸ್‌ಐಎಎಂ) ಪ್ರತಿನಿಧಿಗಳು ಸಹ ಇದೇ ಭರವಸೆ ನೀಡಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ದೇಶದಲ್ಲಿಇಂಧನ ಕ್ರಾಂತಿಯಾಗಲಿದೆ’ ಎಂದು ಮಾಹಿತಿ ನೀಡಿದ್ದಾರೆ.

ಕೊರೊನಾ ಬಿಕ್ಕಟ್ಟು, ಉಕ್ರೇನ್‌-ರಷ್ಯಾ ಯುದ್ಧ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯೇರಿಕೆ ಸೇರಿ ಹಲವು ಕಾರಣಗಳಿಂದಾಗಿ ಪೆಟ್ರೋಲ್‌, ಡೀಸೆಲ್‌ ಬೆಲೆಯೇರಿಕೆಯಾಗುತ್ತಿದ್ದು, ಮಧ್ಯಮ ವರ್ಗದ ಜನರು ಪರದಾಡುವಂತಾಗಿದೆ. ಹಾಗೊಂದು ವೇಳೆ ದೇಶದಲ್ಲಿ ಫ್ಲೆಕ್ಸ್‌-ಫುಯೆಲ್‌ ಇಂಧನ ವ್ಯವಸ್ಥೆ ಜಾರಿಯಾದರೆ ಒಂದು ಲೀಟರ್‌ ಪೆಟ್ರೋಲ್‌ ಬೆಲೆ 70 ರೂ. ಆಗಲಿದೆ ಎಂದೇ ಹೇಳಲಾಗುತ್ತಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...