ನವದೆಹಲಿ: ಮಾಜಿ ರಾಷ್ಟ್ರಪತಿ ಜಾಕಿರ್ ಹುಸೇನ್ ಅವರ ಮರಿಮೊಮ್ಮಗನ ವಿವಾಹವನ್ನು ಮಹಿಳಾ ಖಾಜಿ ನೆರವೇರಿಸಿದ್ದಾರೆ.
ಅಪರೂಪದ ಘಟನೆಯಲ್ಲಿ, ಮಹಿಳಾ ಖಾಜಿಯು ಜಾಕೀರ್ ಹುಸೇನ್ ಅವರ ಮರಿ ಮೊಮ್ಮಗನ ವಿವಾಹವನ್ನು ನೆರವೇರಿಸಿದ್ದಾರೆ. ಮದುವೆ ಸಮಾರಂಭದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, 57 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ.
ಯೋಜನಾ ಆಯೋಗದ ಮಾಜಿ ಸದಸ್ಯರಾದ ಸೈಯದಾ ಸೈಯದೈನ್ ಹಮೀದ್ ಅವರು ರೆಹಮಾನ್ ಮತ್ತು ಉರ್ಸಿಲಾ ಅಲಿ ಅವರ ನಿಕಾಹ್ ಅನ್ನು ಮಾಡುವುದಕ್ಕಾಗಿ ಖಾಜಿಯ ಕರ್ತವ್ಯವನ್ನು ವಹಿಸಿಕೊಂಡಿದ್ದಾರೆ.
ಈ ವಿಡಿಯೋ ನೋಡಿದ ಸಾಮಾಜಿಕ ಮಾಧ್ಯಮ ಬಳಕೆದಾರರು ಸಂತೋಷಪಟ್ಟಿದ್ದಾರೆ. ಇದು ಬದಲಾಗುತ್ತಿರುವ ಸಮಯ ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಇಂತಹ ಬದಲಾವಣೆ ನಿಜಕ್ಕೂ ಆಗಬೇಕಾದದ್ದೇ ಎಂದು ಪ್ರತಿಕ್ರಿಯಿಸಿದ್ದಾರೆ.
ಮುಸ್ಲಿಂ ಧರ್ಮದ ವಿವಾಹಗಳನ್ನು ನಿಕಾಹ್ ಎಂದು ಕರೆಯಲಾಗುತ್ತದೆ. ಇಮಾಮ್ ಅಥವಾ ಮುಲ್ಲಾ (ಧರ್ಮ ಗುರುಗಳು) ಅದನ್ನು ನೆರವೇರಿಸುತ್ತಾರೆ. ಅವರು ಪ್ರಾರ್ಥನೆಗಳನ್ನು ಓದುತ್ತಾರೆ. ಈ ವೇಳೆ ವರ ಹಾಗೂ ಅಲ್ಲಿ ಹಾಜರಿರುವವರು ಮೌನವಾಗಿ ಕುಳಿತು ಷರತ್ತುಗಳನ್ನು ಪೂರೈಸಬೇಕು. ಹೆಚ್ಚಾಗಿ ಇದನ್ನು ಪುರುಷರೇ ನೆರವೇರಿಸುತ್ತಾರೆ. ಆದರೆ, ಮಹಿಳಾ ಖಾಜಿ ನೆರವೇರಿಸಿದ್ದು ವಿಶೇಷವಾಗಿದೆ.
https://www.youtube.com/watch?v=mXq-MsXlVEU