alex Certify 122 ಗಣ್ಯರ ಭದ್ರತೆ ಹಿಂತೆಗೆದುಕೊಂಡಿದ್ದ ಪಂಜಾಬ್ ಹೊಸ ಸಿಎಂ ಮತ್ತೊಂದು ಮಹತ್ವದ ನಿರ್ಧಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

122 ಗಣ್ಯರ ಭದ್ರತೆ ಹಿಂತೆಗೆದುಕೊಂಡಿದ್ದ ಪಂಜಾಬ್ ಹೊಸ ಸಿಎಂ ಮತ್ತೊಂದು ಮಹತ್ವದ ನಿರ್ಧಾರ

ಚಂಡೀಗಢ: ಪಂಜಾಬ್ ನಿಯೋಜಿತ ಮುಖ್ಯಮಂತ್ರಿ ಭಗವಂತ್ ಮಾನ್ 122 ಮಾಜಿ ಶಾಸಕರ ಭದ್ರತೆಯನ್ನು ಹಿಂತೆಗೆದುಕೊಂಡ ಒಂದು ದಿನದ ನಂತರ, 403 ಪೊಲೀಸ್ ಸಿಬ್ಬಂದಿ ಮತ್ತು 27 ಪೊಲೀಸ್ ವಾಹನಗಳು ಪೊಲೀಸ್ ಠಾಣೆಗಳಿಗೆ ಹಿಂತಿರುಗಿವೆ.

ವಿಐಪಿ ಸಂಸ್ಕೃತಿಗೆ ವಿರುದ್ಧವಾದ ಸ್ಪಷ್ಟ ಸಂದೇಶದಲ್ಲಿ, ಭಗವಂತ್ ಮಾನ್ ಅವರು ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರ ಪತ್ನಿ ಸೇರಿದಂತೆ 122 ಮಾಜಿ ಶಾಸಕರು, ಸಚಿವರು ಮತ್ತು ವಿಐಪಿಗಳ ಭದ್ರತೆಯನ್ನು ನಿನ್ನೆ ಹಿಂಪಡೆದಿದ್ದಾರೆ.

ಪಂಜಾಬ್‌ನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಮಾನ್ ಯಾವುದೇ ಸರ್ಕಾರಿ ಕಚೇರಿಯಲ್ಲಿ ಸಿಎಂ ಫೋಟೋಗಳನ್ನು ಹಾಕುವಂತಿಲ್ಲ. ಶಹೀದ್ ಭಗತ್ ಸಿಂಗ್ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರ ಫೋಟೋಗಳನ್ನು ಹಾಕಬೇಕೆಂದು ಹೇಳಿದರು.

“ನಾವು 122 ಜನರ ಭದ್ರತೆಯನ್ನು ಕಡಿತಗೊಳಿಸಿದ್ದೇವೆ. ಇದರಿಂದಾಗಿ 403 ಪೊಲೀಸ್ ಸಿಬ್ಬಂದಿ ಮತ್ತು 27 ಪೊಲೀಸ್ ವಾಹನಗಳು ಪೊಲೀಸ್ ಠಾಣೆಗಳಿಗೆ ಹಿಂತಿರುಗಿವೆ. ಯಾವುದೇ ಸರ್ಕಾರಿ ಕಚೇರಿಯಲ್ಲಿ ಸಿಎಂ ಅವರ ಫೋಟೋಗಳು ಇರುವುದಿಲ್ಲ. ಆದರೆ ಶಹೀದ್ ಭಗತ್ ಸಿಂಗ್ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರ ಫೋಟೋಗಳಿರುತ್ತವೆ ಎಂದು ಭಗವಂತ್ ಮಾನ್ ಹೇಳಿದರು.

ಮತ್ತೊಂದೆಡೆ, ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ಹಲವು ವರ್ಷಗಳ ನಂತರ ಮೊದಲ ಬಾರಿಗೆ ಪಂಜಾಬ್‌ ಗೆ ಈಗ ಪ್ರಾಮಾಣಿಕ ಮುಖ್ಯಮಂತ್ರಿ ಸಿಕ್ಕಿದ್ದಾರೆ. ಈಗ ಎಲ್ಲಾ ಹಣವನ್ನು ಪಂಜಾಬ್ ಮತ್ತು ಅದರ ಜನರಿಗೆ ಖರ್ಚು ಮಾಡಲಾಗುವುದು ಎಂದು ಹೇಳಿದ್ದಾರೆ.

ಅರವಿಂದ್ ಕೇಜ್ರಿವಾಲ್ ಮತ್ತು ಭಗವಂತ್ ಮಾನ್ ಅವರು ಮತದಾರರಿಗೆ ಧನ್ಯವಾದ ಅರ್ಪಿಸಲು ಮತ್ತು ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅದ್ಭುತ ವಿಜಯವನ್ನು ಆಚರಿಸಲು ಇಂದು ರೋಡ್ ಶೋ ನಡೆಸಿದ್ದಾರೆ. 117 ಸದಸ್ಯ ಬಲದ ಪಂಜಾಬ್ ಅಸೆಂಬ್ಲಿಯಲ್ಲಿ ಆಮ್ ಆದ್ಮಿ ಪಕ್ಷ(ಎಎಪಿ) 92 ಸ್ಥಾನಗಳನ್ನು ಗೆಲ್ಲುವ ಅಧಿಕಾರಕ್ಕೇರಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...