ಇವರಿಗೆ ಹಿಂಬಾಲಕರ ಕೂಗು ಇಲ್ಲ, ಅಟ್ಟಕ್ಕೇರಿಸುವ ಬಾಲಬಡುಕರೂ ಇಲ್ಲ. ಆದರೂ ರಾಜಕೀಯದಲ್ಲಿ ದೇಶವೇ ತಿರುಗಿ ನೋಡುವಂತಹ ಸಾಧನೆ ಮಾಡಿರುವುದು ಲಾಭ್ ಸಿಂಗ್.
ಪಂಜಾಬ್ ಚುನಾವಣೆಯಲ್ಲಿ ಬರ್ನಾಲಾ ಜಿಲ್ಲೆಯ ಭದೌರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಈತ ನಿಕಟಪೂರ್ವ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರನ್ನು 37,000 ಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ ಅಸಂಭವ ಅಭ್ಯರ್ಥಿಯಾಗಿ ಕಾಣಿಸಿದ್ದಾರೆ.
ಸಣ್ಣ ಮೊಬೈಲ್ ಅಂಗಡಿಯ ಮಾಲೀಕರಾದ ಲಾಭ್ ಸಿಂಗ್ ಮನೆಯಲ್ಲೀಗ ಸಂಭ್ರಮ. ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಆತನ ತಾಯಿ ಮಗನ ಗೆಲುವು ಕಂಡು ಭಾವಪರವಶಳಾಗಿದ್ದಾಳೆ.
ಮನೆಯನ್ನು ನಡೆಸುವುದು ಅನಿವಾರ್ಯವಾದಾಗ ಪೊರಕೆ ನಮ್ಮೊಂದಿಗಿತ್ತು ಮತ್ತು ಈಗ ನಮ್ಮ ಮಗ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಪೊರಕೆ ನಮಗೆ ಮನ್ನಣೆಯನ್ನು ನೀಡಿದೆ, ಅದು ನಮ್ಮ ಜೀವನದ ಭಾಗವಾಗಿ ಉಳಿಯುತ್ತದೆ ಎಂದು ಸ್ವೀಪರ್ ಆದಂತಹ ಬಲದೇವ್ ಕೌರ್ ಹೇಳಿದರು.
ʼಬೇಸಿಗೆʼ ಸೆಕೆಯಿಂದ ಪಾರಾಗಲು ಇಲ್ಲಿದೆ ಟಿಪ್ಸ್
ಬಲದೇವ್ ಕೌರ್ ಹೇಳುವಂತೆ, ನನ್ನ ಮಗ ಹಾಲಿ ಮುಖ್ಯಮಂತ್ರಿ ವಿರುದ್ಧ ವಿಜಯ ಸಾಧಿಸಿದ್ದಕ್ಕೆ ನನಗೆ ಸಂತೋಷವಾಗಿದೆ, ಆದರೆ ನಾನು ನನ್ನ ಕರ್ತವ್ಯವನ್ನು ಮುಂದುವರಿಸುತ್ತೇನೆ. ನನಗೆ, ಇದು ಜೀವನ ವಿಧಾನವಾಗಿದೆ. ಕೆಲಸದಿಂದ ನನ್ನ ಗಳಿಕೆಯು ಕುಟುಂಬವನ್ನು ನಡೆಸಲು ಸಹಾಯ ಮಾಡುತ್ತದೆ ಎಂದಿದ್ದಾರೆ
35 ವರ್ಷದ ಲಾಭ್ ಸಿಂಗ್ ಅವರು ಉಗೋಕೆ ಗ್ರಾಮದಲ್ಲಿ ಸಣ್ಣ ಮೊಬೈಲ್ ರಿಪೇರಿ ಅಂಗಡಿ ನಡೆಸುತ್ತಿದ್ದರು. ಅವರ ಪತ್ನಿ ವೀರಪಾಲ್ ಕೌರ್ ಟೈಲರ್ ಆಗಿದ್ದಾರೆ. ಅವರ ತಂದೆ ದರ್ಶನ್ ಸಿಂಗ್ ಅರೆಕಾಲಿಕ ಟ್ರ್ಯಾಕ್ಟರ್ ಚಾಲಕರಾಗಿದ್ದಾರೆ.
ಕುಟುಂಬದ ಜೀವನವು ಮೊದಲಿನಂತೆಯೇ ಮುಂದುವರಿಯುತ್ತದೆ ಎಂದು ಲಾಭ್ ಸಿಂಗ್ ಪತ್ನಿ ಕೂಡ ಸ್ಪಷ್ಟಪಡಿಸಿದ್ದರು. ನನ್ನ ಪತಿಯ ಐತಿಹಾಸಿಕ ವಿಜಯದ ನಂತರ ನಮ್ಮಲ್ಲಿ ಹೆಚ್ಚಿನ ಬದಲಾವಣೆಯಾಗುವುದಿಲ್ಲ. ನಾನು ಎಂದಿನಂತೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ ಮತ್ತು ಕುಟುಂಬಕ್ಕೆ ಆರ್ಥಿಕವಾಗಿ ಕೊಡುಗೆ ನೀಡುತ್ತೇನೆ ಮತ್ತು ಈಗ ಹೆಚ್ಚಿನ ಜವಾಬ್ದಾರಿ ನನ್ನ ಮೇಲೆ ಬೀಳುವುದರಿಂದ ನಾನು ಕುಟುಂಬವನ್ನು ನೋಡಿಕೊಳ್ಳುವುದನ್ನು ಮುಂದುವರಿಸುತ್ತೇನೆ ಎಂದು ಹೇಳಿದರು.