ಗಾಯಕಿ ನೇಹಾ ಕಕ್ಕರ್ ಹಾಗೂ ಅವರ ಪತಿ ರೋಹನ್ಪ್ರೀತ್ ಸಿಂಗ್ ಇತ್ತೀಚೆಗೆ ಮಿರ್ಚಿ ಮ್ಯೂಸಿಕ್ ಅವಾರ್ಡ್ಸ್ನಲ್ಲಿ ಕಪ್ಪು ಬಣ್ಣದ ಉಡುಪು ಧರಿಸಿ ಆಗಮಿಸಿದ್ದು, ಬಹಳ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ರೆಡ್ ಕಾರ್ಪೆಟ್ ಈವೆಂಟ್ನಲ್ಲಿ ಇಬ್ಬರೂ ವಾಕ್ ಮಾಡಿದ್ದು, ಕ್ಯಾಮರಾಗೆ ಪೋಸ್ ನೀಡಿದ್ದಾರೆ.
ಆದರೆ, ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ನೇಹಾ ಪತಿಯನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದಾರೆ. ರೋಹನ್ ಪ್ರೀತ್ ತಮ್ಮ ಕುತ್ತಿಗೆಗೆ ವಿಶಿಷ್ಟವಾದ ಹಾರವೊಂದನ್ನು ಧರಿಸಿದ್ದರು. ರೋಹನ್ ಪ್ರೀತ್ ತಮ್ಮ ಮಡದಿ ನೇಹಾ ಅವರ ನೆಕ್ಲೇಸ್ ಧರಿಸಿದ್ದಾರೆಯೇ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.
ದಂಪತಿಗಳು ಅಕ್ಟೋಬರ್ 24, 2020 ರಂದು ವಿವಾಹವಾಗಿದ್ದಾರೆ. ಕುಟುಂಬ ಮತ್ತು ನಿಕಟ ಸ್ನೇಹಿತರೊಂದಿಗೆ ದೆಹಲಿಯ ಗುರುದ್ವಾರದಲ್ಲಿ ಸಾಂಪ್ರದಾಯಿಕ ಆನಂದ್ ಕರಾಜ್ ಸಮಾರಂಭದ ಪ್ರಕಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಗಾಯಕಿ ನೇಹಾ ತನ್ನದೇ ಆದ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿದ್ದು ಸಾಕಷ್ಟು ಹಿಟ್ ಆಗಿದೆ. ಮತ್ತು ಅವರ ಶೋ ಲೈಫ್ ಆಫ್ ಕಕ್ಕರ್ಸ್ ಅನ್ನು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ.