ಉಕ್ರೇನ್ನ ಮರಿಯುಪೋಲ್ನಲ್ಲಿ 80 ನಾಗರಿಕರಿಗೆ ಆಶ್ರಯ ನೀಡುತ್ತಿದ್ದ ಮಸೀದಿಯ ಮೇಲೆ ರಷ್ಯಾದ ಪಡೆಗಳು ಬಾಂಬ್ ದಾಳಿ ನಡೆಸಿವೆ ಎಂದು ಉಕ್ರೇನ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಯುದ್ಧದಿಂದ ಹಾನಿಗೊಳಗಾದ ಪೂರ್ವ ಯುರೋಪಿಯನ್ ದೇಶದ ವಿದೇಶಾಂಗ ಸಚಿವಾಲಯವು ಮಾರಿಯುಪೋಲ್ನಲ್ಲಿರುವ ಸುಲ್ತಾನ್ ಸುಲೇಮಾನ್ ದಿ ಮ್ಯಾಗ್ನಿಫಿಸೆಂಟ್ ಹಾಗೂ ಅವರ ಪತ್ನಿ ರೊಕ್ಸೊಲಾನಾರ ಮಸೀದಿಯನ್ನು ರಷ್ಯಾದ ಆಕ್ರಮಣಕಾರರು ಹಾನಿಗೊಳಿಸಿದ್ದಾರೆ ಎಂದು ಟ್ವೀಟ್ ಮಾಡಿದೆ.
ಇಂದು ಮುಂಜಾನೆ ಟರ್ಕಿಯಲ್ಲಿನ ಉಕ್ರೇನ್ ರಾಯಭಾರ ಕಚೇರಿಯ ವಕ್ತಾರರು, ಮರಿಯುಪೋಲ್ ಮೇಯರ್ ಮಾಹಿತಿಯನ್ನು ಉಲ್ಲೇಖಿಸಿ, ರಷ್ಯಾದ ದಾಳಿಯನ್ನು ಉಲ್ಲೇಖಿಸಿ ಮಸೀದಿಯಲ್ಲಿ ಆಶ್ರಯ ಪಡೆದವರಲ್ಲಿ 34 ಮಂದಿ ಮಕ್ಕಳು ಸೇರಿದಂತೆ 86 ಮಂದಿ ಟರ್ಕಿ ಪ್ರಜೆಗಳು ಸೇರಿದ್ದಾರೆ ಎಂದು ಹೇಳಿದ್ದರು.
ಮಾರಿಯುಪೋಲ್ನಲ್ಲಿ ನಿಜಕ್ಕೂ ಸಂಪರ್ಕ ಸಾಧಿಸಲು ಸಮಸ್ಯೆಯಾಗುತ್ತಿದೆ. ಇವುಗಳನ್ನು ತಲುಪಲು ಬೇರಾವುದೇ ಅವಕಾಶ ಕಾಣುತ್ತಿಲ್ಲ ಎಂದು ಟರ್ಕಿಯಲ್ಲಿನ ಉಕ್ರೇನ್ ರಾಯಭಾರ ಕಚೇರಿಯ ವಕ್ತಾರರು ಹೇಳಿದ್ದರು.