ನನ್ನ ಪತ್ನಿಯು ಪುರುಷ ಜನನಾಂಗವನ್ನು ಹೊಂದಿರುವ ವಿಚಾರವನ್ನು ಮುಚ್ಚಿಟ್ಟು ನನಗೆ ವಂಚನೆ ಮಾಡಿದ್ದಾಳೆ. ಹೀಗಾಗಿ ಆಕೆಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಕೋರಿ ಪತಿಯು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಇಂದು ಸಮ್ಮತಿ ನೀಡಿದೆ.
ಆರಂಭದಲ್ಲಿ ಈ ಅರ್ಜಿಯನ್ನು ಪರಿಗಣಿಸಲು ಇಷ್ಟವಿರಲಿಲ್ಲ. ಆದರೆ ನ್ಯಾಯಾಧೀಶರಾದ ಸಂಜಯ್ ಕಿಶನ್ ಕೌಲ್ ಹಾಗೂ ಎಂಎಂ ಸುಂದ್ರೇಶ ಅವರಿದ್ದ ಪೀಠವು, ಪುರುಷನು ತನ್ನ ಪತ್ನಿಗೆ ಶಿಶ್ನ ಹಾಗೂ ಅಪೂರ್ಣ ಕನ್ಯಾಪೊರೆ ಇದೆ ಎಂದು ವೈದ್ಯಕೀಯ ವರದಿಯನ್ನು ಕೋರ್ಟ್ಗೆ ನೀಡಿದ್ದಾರೆ. ಇದಾದ ಬಳಿಕ ಕೋರ್ಟ್ ಈ ಬಗ್ಗೆ ಪತ್ನಿಯ ಪ್ರತಿಕ್ರಿಯೆಯನ್ನು ಕೇಳಲು ಮುಂದಾಗಿದೆ.
ಪುರುಷನ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಎನ್.ಕೆ ಮೋದಿ, ಅರ್ಜಿದಾರನ ಪತ್ನಿಯು ಓರ್ವ ಪುರುಷ ಆಗಿರುವುದರಿಂದ ಇದು ಭಾರತೀಯ ದಂಡ ಸಂಹಿತೆ 420 ಅಡಿಯಲ್ಲಿ ಕ್ರಿಮಿನಲ್ ಅಪರಾಧವಾಗುತ್ತದೆ ಎಂದು ವಾದಿಸಿದ್ದಾರೆ.
ಆಕೆ ಒಬ್ಬ ಗಂಡಸು. ಇಲ್ಲಿ ಖಂಡಿತವಾಗಿಯೂ ಮೋಸವಾಗಿದೆ. ವೈದ್ಯಕೀಯ ದಾಖಲೆಗಳನ್ನು ಒಮ್ಮೆ ನೋಡಿ. ಇದು ಕೇವಲ ಜನ್ಮಜಾತ ಅಸ್ವಸ್ಥೆಯ ಪ್ರಕರಣವಲ್ಲ. ಅರ್ಜಿದಾರರನ್ನು ಓರ್ವ ಪುರುಷನೇ ಮದುವೆಯಾಗಿ ಮಾಡಿರುವ ವಂಚನೆಯಾಗಿದೆ. ಏಕೆಂದರೆ ಪತ್ನಿಗೆ ತನ್ನ ಜನನಾಂಗದ ಬಗ್ಗೆ ಖಚಿತವಾದ ಮಾಹಿತಿ ಮೊದಲೇ ಇತ್ತು ಎಂದು ಮೋದಿ ಹೇಳಿದ್ದಾರೆ.