ಬೇಸಿಗೆ ಕಾಲ ಆರಂಭವಾಗಿದೆ. ಸೆಖೆ ತಡೆಯಲಾಗದೆ ನೀರಿಗೆ ಹಾರಬೇಕು ಎಂದೆನಿಸೋದಂತು ಸುಳ್ಳಲ್ಲ. ಆದರೆ, ಈ ಬಾಲಿವುಡ್ ಸೆಲೆಬ್ರಿಟಿಗಳಿಗೆ ಯಾವ ಕಾಲವು ಕೂಡ ಸೆಖೆಗಾಲವೇ ಆಗಿರುತ್ತದೆ ಎಂದೆನಿಸುತ್ತದೆ. ಯಾಕೆಂದರೆ ಅವರು ಹೆಚ್ಚಾಗಿ ನೀರಿನಲ್ಲಿ ಮೋಜು-ಮಸ್ತಿ ಮಾಡಲು ಇಷ್ಟಪಡುತ್ತಾರೆ. ಇದೀಗ ಶಾರುಖ್ ಪುತ್ರಿ ಸುಹಾನಾ ಖಾನ್, ಶನಯಾ ಕಪೂರ್ ಹಾಗೂ ಅನನ್ಯಾ ಪಾಂಡೆ ತಮ್ಮ ಈಜುಡುಗೆಯಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.
ಹೌದು, ಸ್ನೇಹಿತರ ಜೊತೆಗಿದ್ದರೆ ಸಮಯ ಹೋಗುವುದೇ ಗೊತ್ತಾಗೋದಿಲ್ಲ. ಇದೀಗ ಈ ಮೂವರ ಜೋಡಿಯು ಸಾಕಷ್ಟು ಮೋಜು-ಮಸ್ತಿಯನ್ನು ಮಾಡಿದೆ. ಶನಯಾ ಕಪೂರ್ ಪಿಂಕ್ ಸ್ವಿಮ್ಸೂಟ್ ಧರಿಸಿ ಅದ್ಭುತವಾಗಿ ಕಾಣುತ್ತಿದ್ದಾರೆ. ಅನನ್ಯಾ ಪಾಂಡೆ ಕೂಡ ಬಿಕಿನಿ ಧರಿಸಿ ಮಿಂಚುತ್ತಿದ್ದಾರೆ. ಇತ್ತ ಸುಹಾನಾ ಖಾನ್ ಕಪ್ಪು ಬಣ್ಣದ ಬಿಕಿನಿಯಲ್ಲಿ ಕಂಗೊಳಿಸುತ್ತಿದ್ದಾರೆ.
ಸುಹಾನಾ ಖಾನ್ ಬಹಳ ಸಮಯದ ನಂತರ ಮುಂಬೈಗೆ ಮರಳಿದ್ದಾರೆ. ಹೀಗಾಗಿ ತಮ್ಮ ಗೆಳತಿಯರೊಂದಿಗೆ ಅದ್ಭುತ ಕ್ಷಣಗಳನ್ನು ಅವರು ಕಳೆದಿದ್ದಾರೆ. ತಮ್ಮ ಮೂವರ ಇನ್ನೊಂದು ಫೋಟೋವನ್ನು ಸುಹಾನಾ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಪುಟ್ಟ ಬ್ಯಾಗ್ ಹಾಗೂ ಬಿಳಿ ಬಣ್ಣದ ಮಿನಿ ಡ್ರೆಸ್ ಅನ್ನು ಶನಯಾ ಧರಿಸಿದ್ದರೆ, ಅನನ್ಯಾ ನೇರಳೆ ಬಣ್ಣದ ಉಡುಗೆ ತೊಟ್ಟಿದ್ದಾರೆ. ಹಾಗೆಯೇ ಸುಹಾನಾ ಖಾನ್ ಬಿಳಿ ಕೋಲ್ಡ್-ಶೋಲ್ಡರ್ ಕ್ರಾಪ್ ಟಾಪ್ ಜೊತೆಗೆ ಪಿನ್ಸ್ಟ್ರೈಪ್ಡ್ ಪ್ಯಾಂಟ್ ಧರಿಸಿ ಮಿಂಚಿದ್ದಾರೆ.
ಈ ತಿಂಗಳ ಆರಂಭದಲ್ಲಿ, ಫರ್ಹಾನ್ ಅಖ್ತರ್ ಮತ್ತು ಶಿಬಾನಿ ದಾಂಡೇಕರ್ ಅವರ ವಿವಾಹವು ಚರ್ಚೆಯಾಗಿದ್ದರೆ, ಮಲೈಕಾ ಅರೋರಾ ಅವರು ಸುಹಾನಾ, ಶನಯಾ ಮತ್ತು ಅನನ್ಯಾ ಅವರ ಸಂಭ್ರಮದ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಬೇಬಿ ಗೊಂಬೆಗಳೆಲ್ಲ ಬೆಳೆದಿದ್ದಾರೆ ಎಂಬ ಶೀರ್ಷಿಕೆಯನ್ನು ಅವರು ನೀಡಿದ್ದರು.