ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷವು ಪಂಜಾಬ್‌ನಲ್ಲಿ ಗೆದ್ದು ಬೀಗಿರುವುದು ಎಲ್ಲರಿಗೂ ತಿಳಿದಿದ್ದೇ. ಪಂಜಾಬ್ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಭಗವಂತ್ ಮಾನ್ ಅವರೊಂದಿಗೆ ದೆಹಲಿ ಮುಖ್ಯಮಂತ್ರಿ ಡ್ಯಾನ್ಸ್ ಮಾಡುವ ಎಡಿಟ್ ಮಾಡಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದೆ.
ಟ್ವಿಟ್ಟರ್‌ನಲ್ಲಿ ಹರಿದಾಡುತ್ತಿರುವ ವಿಡಿಯೋವನ್ನು ಆಪ್ ಕೂಡ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದೆ. ಇಬ್ಬರು ವ್ಯಕ್ತಿಗಳ ನೃತ್ಯದ ದೃಶ್ಯದಲ್ಲಿ ಕೇಜ್ರಿವಾಲ್ ಮತ್ತು ಭಗವಂತ್ ಮಾನ್ ಅವರ ಮುಖಗಳನ್ನು ತೋರಿಸುತ್ತದೆ. ವೈರಲ್ ಹಿಟ್ ಸಾಂಗ್ ಕಚಾ ಬಾದಮ್‌ನ ಟ್ಯೂನ್‌ಗಳನ್ನು ಪ್ಲೇ ಮಾಡಲಾಗಿದೆ.
ಮೆಟ್ಟಿಲಿನಿಂದ ಕೆಳಗೆ ಇಳಿದು ಬರುತ್ತಿರುವ ವ್ಯಕ್ತಿಗೆ ಭಗವಂತ್ ಮಾನ್ ಅವರ ಮುಖವನ್ನಿಡಲಾಗಿದೆ. ಅವರು ಇಳಿದು ಬರುತ್ತಿದ್ದಂತೆ ಇನ್ನೇನು ಕೆಳಗೆ ಬೀಳುತ್ತಾರೆ ಎಂದೆನ್ನುವಾಗ ಅರವಿಂದ್ ಕೇಜ್ರಿವಾಲ್ ಮುಖವಾಢಧಾರಿ ಆತನನ್ನು ಹಿಡಿದೆತ್ತುತ್ತಾರೆ.
ಬಳಿಕ ಇಬ್ಬರೂ ನೃತ್ಯ ಮಾಡುತ್ತಿದ್ದರೆ, ರಾಹುಲ್ ಗಾಂಧಿ ಹಾಗೂ ಚರಂಜಿತ್ ಸಿಂಗ್ ಚನ್ನಿ, ನವಜೋತ್ ಸಿಂಗ್ ಸಿಧು ಮುಖವಾಡಧಾರಿಗಳು ನೋಡುತ್ತಾ ನಿಂತಿದ್ದಾರೆ. ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಆಮ್ ಆದ್ಮಿ ಪಾರ್ಟಿ ಅತ್ಯುತ್ತಮ ಜೋಡಿ ಎಂದು ಶೀರ್ಷಿಕೆ ನೀಡಿದೆ.
https://youtu.be/pfbKsWEu-Z8