ಸೋಶಿಯಲ್ ಮೀಡಿಯಾದಲ್ಲಿ ಮನಸ್ಸಿಗೆ ಮುದ ನೀಡುವಂತಹ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತದೆ. ಇದೇ ಸಾಲಿಗೆ ವಿಡಿಯೋವೊಂದು ಸೇರಿದ್ದು, ಪುಟ್ಟ ಪುಟ್ಟ ಹೆಜ್ಜೆ ಇಡುತ್ತ ಮಗುವೊಂದು ಒಂದೇ ತೆರನಾದ ಸೀರೆಯನ್ನು ಧರಿಸಿದ್ದ ಮಹಿಳೆಯರ ಗುಂಪಿನಿಂದ ತನ್ನ ತಾಯಿಯನ್ನು ಗುರುತಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದಾಗಿದೆ. ಈ ವಿಡಿಯೋ 18 ಮಿಲಿಯನ್ಗೂ ಅಧಿಕ ವೀವ್ಸ್ ಸಂಪಾದಿಸಿದೆ.
ಒಂದೇ ರೀತಿಯ ಹಳದಿ ಬಣ್ಣದ ಸೀರೆಯನ್ನು ಧರಿಸಿರುವ ನಾಲ್ವರು ಮಹಿಳೆಯರಿದ್ದ ಕೋಣೆಗೆ ಪುಟ್ಟ ಮಗು ಪ್ರವೇಶಿಸುತ್ತದೆ. ಎಲ್ಲಾ ಮಹಿಳೆಯರು ಮಗುವಿಗೆ ತಮ್ಮ ಹತ್ತಿರ ಬರುವಂತೆ ಸನ್ನೆ ಮಾಡಿದ್ದಾರೆ. ಮಗು ಕೂಡಲೇ ಓರ್ವ ಮಹಿಳೆ ಬಳಿ ಹೋದನು. ಆದರೆ ಅದು ತನ್ನ ತಾಯಿಯಲ್ಲ ಎಂದು ಅರಿತುಕೊಂಡಿದ್ದಾನೆ. ಬಳಿಕ ಕೆಲವೇ ಸೆಕೆಂಡುಗಳನ್ನು ತನ್ನ ತಾಯಿಯನ್ನು ಗುರುತಿಸಿದ್ದಾನೆ, ಹಾಗೂ ತಾಯಿಯ ಮಡಿಲ ಮೇಲೆ ಹೋಗಿ ಕುಳಿತಿದಿದ್ದಾನೆ.
https://youtu.be/nKcedmt-kaE
https://www.instagram.com/reel/CawgLz-h0ef/?utm_source=ig_web_copy_link