ಕೊಪ್ಪಳ: ನಿಶ್ಚಿತಾರ್ಥಕ್ಕೆಂದು ಹೊರಟಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿಯ ನವಲಿ ರೈಸ್ ಟೆಕ್ನಾಲಜಿ ಪಾರ್ಕ್ ಬಳಿ ಸಂಭವಿಸಿದೆ.
55 ವರ್ಷದ ಯಮನೂರಪ್ಪ ಸಿಂಧನೂರು, 45 ವರ್ಷದ ಅಂಬಮ್ಮ, 60 ವರ್ಷದ ದ್ಯಾವಮ್ಮ ಹಾಗೂ 40 ವರ್ಷದ ಶೇಷಪ್ಪ ಬಂಡಿ ಮೃತರು.
ಕೊಪ್ಪಳದ ಕಾರಟಿಗಿಯಿಂದ ಕನಕಗಿರಿಗೆ ನಿಶ್ಚಿತಾರ್ಥಕ್ಕಾಗಿ 25ಕ್ಕೂ ಹೆಚ್ಚು ಜನರು ಟ್ರ್ಯಾಕ್ಟರ್ ನಲ್ಲಿ ಪ್ರಯಾಣಿಸಿದ್ದರು. ಟ್ರ್ಯಾಕ್ಟರ್ ಪಲ್ಟಿಯಾಗಿ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ.