ಭಾರತೀಯ ಸ್ಟೇಟ್ ಬ್ಯಾಂಕ್(SBI) ತನ್ನ ಮೊಬೈಲ್ ಅಪ್ಲಿಕೇಶನ್ – ಯೋನೋವನ್ನು (YONO) ನವೀಕರಿಸುವ ಯೋಜನೆಗಳನ್ನು ಪ್ರಕಟಿಸಿದೆ. ದೇಶದ ಸರ್ಕಾರೀ ಸ್ವಾಮ್ಯದ ಅತಿ ದೊಡ್ಡ ಬ್ಯಾಂಕ್ “ಓನ್ಲಿ ಯೋನೋ” ಎಂಬ ಹೊಸ ಹೆಸರಿನ ಅಡಿಯಲ್ಲಿ ಅಪ್ಲಿಕೇಶನ್ ನವೀಕರಿಸುವುದಾಗಿ ತಿಳಿಸಿದೆ.
ಯೋನೋ ಭಾರತದಲ್ಲಿನ ಅತ್ಯಂತ ಜನಪ್ರಿಯ ಬ್ಯಾಂಕಿಂಗ್ ಅಪ್ಲಿಕೇಶನ್ಗಳಲ್ಲಿ ಒಂದಾಗಿದ್ದು, 54 ಮಿಲಿಯನ್ಗಿಂತಲೂ ಹೆಚ್ಚು ಮಾಸಿಕ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಈ ಪ್ಲಾಟ್ಫಾರ್ಮ್ 2021ರಲ್ಲಿ ಮಾಸಿಕ ಸಕ್ರಿಯ ಬಳಕೆದಾರರ ಸಂಖ್ಯೆಯಲ್ಲಿ 35%ಗಿಂತ ಹೆಚ್ಚಿನ ಬೆಳವಣಿಗೆಯನ್ನು ಕಂಡಿದೆ.
“ಯು ಓನ್ಲಿ ನೀಡ್ ಒನ್ (YONO)” ಹೆಸರಿನ ಅಪ್ಲಿಕೇಶನ್ ಅನ್ನು 2017ರಲ್ಲಿ ಪ್ರಾರಂಭಿಸಲಾಗಿದೆ. SBI ಪ್ರಕಾರ ಈ ಕ್ರಮವು ಗ್ರಾಹಕರ ಅನುಭವ ಮತ್ತು ಬಳಕೆಯ ಸರಳತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
SBI ಪ್ರಸ್ತುತ ತನ್ನ ಮೊಬೈಲ್ ಬ್ಯಾಂಕಿಂಗ್ ಪ್ಲಾಟ್ಫಾರ್ಮ್ನ ನವೀಕರಣವನ್ನು ಮುಂದಿನ 12-18 ತಿಂಗಳುಗಳಲ್ಲಿ ಕಾರ್ಯಗತಗೊಳಿಸಲು ಉದ್ದೇಶಿಸಿದೆ. ಇದು ಓನ್ಲೀ ಯೋನೋ ಪ್ಲಾಟ್ಫಾರ್ಮ್ಗೆ ಅಸ್ತಿತ್ವದಲ್ಲಿರುವ ಕೋಟಿಗಟ್ಟಲೆ ಯೋನೋ ಗ್ರಾಹಕರನ್ನು ಸ್ಥಳಾಂತರಿಸುವುದನ್ನು ಒಳಗೊಂಡಿದೆ.
ಹಿಂದೆ, SBI ಯೊನೊವನ್ನು ಸಂಪೂರ್ಣವಾಗಿ ಪ್ರತ್ಯೇಕ ಅಂಗಸಂಸ್ಥೆಯಾಗಿ ರಚಿಸಲು ನೋಡುತ್ತಿತ್ತು. SBIನ ಮಾಜಿ ಅಧ್ಯಕ್ಷ ರಜನೀಶ್ ಕುಮಾರ್ ಅವರು ಈ ಆ್ಯಪ್ ಒಂದೇ ಸುಮಾರು 40 ಬಿಲಿಯನ್ ಡಾಲರ್ಗಳಷ್ಟು ಮೌಲ್ಯವನ್ನು ತರಬಲ್ಲದು ಎನ್ನುತ್ತಾರೆ.