ನಿಮಗೆ ನಿಮ್ಮ ಶಾಲಾ ದಿನಗಳು ನೆನಪಿದೆಯೇ..? ಶಾಲೆಗೆ ಹೊರಡಬೇಕು ಎಂದಾದಾಗ ಬಹುತೇಕ ಮಕ್ಕಳಿಗೆ ಹೊಟ್ಟೆನೋವು, ತಲೆನೋವು ಶುರುವಾಗುವುದು ಸಾಮಾನ್ಯ. ಅದರಲ್ಲೂ ಭಾನುವಾರದ ರಜೆ ಕಳೆದು ಸೋಮವಾರ ಹೋಗುವುದೆಂದರೆ ಮತ್ತಷ್ಟು ಕಷ್ಟವಾಗಬಹುದು. ಇದೀಗ ಇಂಥದ್ದೇ ವಿಡಿಯೋವೊಂದನ್ನು ಯೂಟ್ಯೂಬ್ ಚಾನೆಲ್ ನಲ್ಲಿ ಪೋಸ್ಟ್ ಮಾಡಲಾಗಿದ್ದು, ಖಂಡಿತಾ ನೀವು ನಗೋದ್ರಲ್ಲಿ ಸಂಶಯವೇ ಇಲ್ಲ.
ಹೌದು, ಸಿಬಿಎಸ್ ನ್ಯೂಸ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಲ್ಯಾಂಡ್ರಿ ಕಿಂಗ್ ಎಂಬ 4 ವರ್ಷದ ಮಗುವಿನ ವಿಡಿಯೋವನ್ನು ಪೋಸ್ಟ್ ಮಾಡಿದೆ. ಇನ್ನೇನು ಶಾಲಾ ಬಸ್ ವಾಹನ ಹತ್ತಬೇಕು ಎಂದಾದಾಗ ಇದ್ದಕ್ಕಿದ್ದಂತೆ, ನೆಲದ ಮೇಲೆ ಮಲಗಿದ್ದಾನೆ. ಒಂದು ಕ್ಷಣ ಅರೆ ಈ ಬಾಲಕನಿಗೆ ಏನಾಯಿತು ಅಂತಾ ಭೀತಿ ಮೂಡೋದು ಸಹಜ.
ಬಾಲಕ ಬಿದ್ದ ಸ್ಥಿತಿಯನ್ನು ನೋಡಿ ಪರಿಚಾರಕ ಬಸ್ ನಿಂದ ಇಳಿದು ಹತ್ತಿರ ಬರುತ್ತಿದ್ದಂತೆ, ಬಾಲಕ ಎದ್ದು ನಿಂತಿದ್ದಾನೆ. ಬಳಿಕ ಪರಿಚಾರಕ ಬಾಲಕನನ್ನು ಬಸ್ ಹತ್ತಿಸಿದ್ದಾನೆ. ಸೋಮವಾರ ಶಾಲೆಗೆ ತೆರಳುವುದೆಂದರೆ ಬಹುತೇಕ ಮಕ್ಕಳ ಕಥೆ ಇಷ್ಟೇ ಆಗಿರುತ್ತದೆ.
ಸಿಬಿಎಸ್ ನ್ಯೂಸ್ ಪ್ರಕಾರ, ಸಿಸಿಟಿವಿ ಕ್ಯಾಮೆರಾದ ಕ್ಲಿಪ್ ಅನ್ನು ಶಾಲಾ ಮಗುವಿನ ತಾಯಿ ಲ್ಯಾಂಡ್ರಿ ಹಂಚಿಕೊಂಡಿದ್ದಾರೆ. ತನ್ನ ಮಗುವಿನ ಜೊತೆಗೆ ತಾಳ್ಮೆಯಿಂದಿದ್ದಕ್ಕಾಗಿ ಬಸ್ ಅಟೆಂಡೆಂಟ್ಗೆ ಧನ್ಯವಾದ ಹೇಳುವ ವಿಡಿಯೋವನ್ನು ಆಕೆ ಹಂಚಿಕೊಂಡಿದ್ದಾಳೆ. ಈ ವಿಡಿಯೋ ಅಂತರ್ಜಾಲದಲ್ಲಿ ಸಾಕಷ್ಟು ಗಮನ ಸೆಳೆದಿದ್ದು, ವೈರಲ್ ಆಗಿದೆ. ವಿಡಿಯೋಗೆ ನೆಟ್ಟಿಗರು ಉಲ್ಲಾಸದ ಕಾಮೆಂಟ್ಗಳನ್ನು ಮಾಡಿದ್ದಾರೆ.