ಖಾಸಗಿ ವಿಮಾನದಲ್ಲಿ ಹಾರುವ ಐಷಾರಾಮಿ ಜೀವನ ಕೆಲವರಿಗೆ ಮಾತ್ರ ಸಾಧ್ಯವಾಗುತ್ತದೆ. ಆದರೆ, ಯುವತಿಯೊಬ್ಬಳು ವಿಮಾನದಲ್ಲಿ ಏಕಾಂಗಿಯಾಗಿ ಪ್ರಯಾಣಿಸಿದ್ದು, ಆಕೆಯ ಅದ್ಭುತ ಅನುಭವದ ವಿಡಿಯೋವು ಅನೇಕರಿಗೆ ಅಸೂಯೆ ಉಂಟುಮಾಡಿದೆ.
ಅರೋರಾ ಟೊರೆಸ್ ಎಂಬಾಕೆ ಇತ್ತೀಚೆಗೆ ಒಂಟಿಯಾಗಿ ವಿಮಾನವನ್ನೇರಿದ್ದಾಳೆ. ಆಕೆಯ ಅದೃಷ್ಟಕ್ಕೆ ಬೇರೆ ಯಾರೂ ಪ್ರಯಾಣಿಕರೇ ಇರಲಿಲ್ಲ. ಹೀಗಾಗಿ ನಾರ್ವೇಜಿಯನ್ ಏರ್ಲೈನ್ನ ಸಿಬ್ಬಂದಿ ಟೊರೆಸ್ ಳನ್ನು ಮುಂಭಾಗದಲ್ಲಿ ಕುಳಿತುಕೊಳ್ಳಲು ಇಷ್ಟಪಡುತ್ತೀರಾ ಎಂದು ಕೇಳಿದ್ದಾರೆ.
ಬಹಳ ಖುಷಿಯಿಂದಲೇ ಮುಂಭಾಗದಲ್ಲಿ ಕುಳಿತ ಆಕೆ ಅಪರೂಪದ ಕ್ಷಣವನ್ನು ತನ್ನ ಮೊಬೈಲ್ ನಲ್ಲಿ ಸೆರೆಹಿಡಿದ್ದಾಳೆ. ಅದ್ಭುತ ವಿಡಿಯೋವನ್ನು ತನ್ನ ಇನ್ಸ್ಟಾಗ್ರಾಂ ಪುಟದಲ್ಲಿ ಹಂಚಿಕೊಂಡಿದ್ದಾಳೆ. ಟೊರೆಸ್ ಹಂಚಿಕೊಂಡ ವಿಡಿಯೋದಲ್ಲಿ ವಿಮಾನದೊಳಗಿನ ಖಾಲಿ ಸೀಟುಗಳು, ವಿಮಾನವನ್ನು ಹಾರಿಸುತ್ತಿರುವ ಪೈಲಟ್ ಗಳ ದೃಶ್ಯವನ್ನು ಹಂಚಿಕೊಂಡಿದ್ದಾಳೆ.
ಸಾಮಾನ್ಯವಾಗಿ ಕಾಕ್ಪಿಟ್ಗೆ ಸಿಬ್ಬಂದಿ ಬಿಟ್ಟು ಬೇರೆ ಯಾರ ಪ್ರವೇಶವೂ ಇರುವುದಿಲ್ಲ. ಆದರೆ ಟೊರೆಸ್ ಸ್ವತಃ ಕಾಕ್ಪಿಟ್ ಬಳಿ ಬಂದಿದ್ದು ವಿಶೇಷವಾಗಿತ್ತು. ಇದೊಂದು ಅದ್ಭುತ ಕ್ಷಣವಾಗಿತ್ತು ಎಂದು ಟೊರೆಸ್ ಹೇಳಿದ್ದಾಳೆ.