ಪಂಜಾಬ್ನಲ್ಲಿ ಹಾಲಿ ಸಿಎಂ ಚರಣ್ಜೀತ್ ಸಿಂಗ್ ಚನ್ನಿ ಎರಡೂ ಕ್ಷೇತ್ರಗಳಲ್ಲಿ ಸೋಲು ಕಂಡ ಬೆನ್ನಲ್ಲೇ ಉತ್ತರಾಖಂಡ್ನಲ್ಲೂ ಕೂಡ ಹಾಲಿ ಸಿಎಂ ಪುಷ್ಕರ್ ಸಿಂಗ್ ಧಾಮಿ ಸೋಲನ್ನು ಕಂಡಿದ್ದಾರೆ. ಖತಿಮಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭುವನ್ ಚಂದ್ರ ಕಪ್ರಿ ವಿರುದ್ಧ 7225 ಮತಗಳ ಅಂತರದಲ್ಲಿ ಸೋಲನ್ನು ಅನುಭವಿಸಿದ್ದಾರೆ.
ಧಾಮಿ ಖತಿಮಾ ಕ್ಷೇತ್ರದಲ್ಲಿ 37254 ಮತಗಳನ್ನು ಪಡೆದಿದ್ದಾರೆ. ಕಪ್ರಿ 44479 ಮತಗಳನ್ನು ಸಂಪಾದಿಸಿದ್ದಾರೆ. ಉತ್ತರಾಖಂಡ್ನಲ್ಲಿ ಬಿಜೆಪಿ ಬಹುಮತದತ್ತ ದಾಪುಗಾಲು ಇಡುತ್ತಿದೆ. ಪುಷ್ಕರ್ ಸಿಂಗ್ ಧಾಮಿಯನ್ನು, ಉತ್ತರಾಖಂಡ್ನ ಸಿಎಂ ಅಭ್ಯರ್ಥಿ ಎಂದೇ ಭಾವಿಸಲಾಗಿತ್ತು. ಆದರೆ ಇದೀಗ ಧಾಮಿಯೇ ಸೋಲನ್ನು ಅನುಭವಿಸಿದ್ದು ಬಿಜೆಪಿ ಪಾಲಿಗೆ ತಲೆನೋವಾಗಿ ಪರಿಣಮಿಸಿದೆ.
ಆದರೆ, ಬಿಜೆಪಿ ತನ್ನ 21 ವರ್ಷಗಳ ಇತಿಹಾಸದಲ್ಲಿ ಯಾವತ್ತೂ ನಡೆಯದಂತಹ ಸತತ ಎರಡು ವಿಧಾನಸಭಾ ಚುನಾವಣೆಗಳನ್ನು ರಾಜ್ಯದಲ್ಲಿ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸುವ ಹಾದಿಯಲ್ಲಿದೆ.