ಬೆಂಗಳೂರು: ಪಂಚರಾಜ್ಯ ಚುನಾವಣೆ ಸಂದರ್ಭದಲ್ಲಿ ಪ್ರಕಟಗೊಂಡಿದ್ದ ಮತಗಟ್ಟೆಗಳ ಸಮೀಕ್ಷೆ ಚುನಾವಣೆ ಫಲಿತಾಂಶದಿಂದ ಸತ್ಯವಾಗಿದೆ. ಪ್ರಾದೇಶಿಕ ಪಕ್ಷವನ್ನು ಮುಗಿಸುತ್ತೇವೆ ಎನ್ನುವ ನಾಯಕರಿಗೆ ಈಗಲಾದರೂ ಜ್ಞಾನೋದಯವಾಗಬೇಕಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾನಿ ತಿಳಿಸಿದ್ದಾರೆ.
ಮತ್ತೊಮ್ಮೆ ಅಧಿಕಾರಕ್ಕೇರಿ ನೋಯ್ಡಾಗೆ ಅಂಟಿದ್ದ ಶಾಪ ಅಳಿಸಿ ಹಾಕಿದ ಯೋಗಿ ಆದಿತ್ಯನಾಥ್….!
5 ರಾಜ್ಯಗಳ ಚುನಾವಣಾ ಫಲಿತಾಂಶಗಳ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನೂರಾರು ವರ್ಷಗಳ ಇತಿಹಾಸ ಇದೆ ಎನ್ನುವ ಪ್ರಾದೇಶಿಕ ಪಕ್ಷವನ್ನು ಮುಗಿಸುತ್ತೇವೆ ಎನ್ನುವ ಕಾಂಗ್ರೆಸ್ ಗೆ ಜ್ಞಾನೋದಯ ಮಾಡಿಸಬೇಕಾದ ಫಲಿತಾಂಶ ಇದು ಎಂದು ಹೇಳಿದ್ದಾರೆ.
ಪಂಜಾಬ್ ಚುನಾವಣೆ ಫಲಿತಾಂಶದಲ್ಲಿ ಆಪ್ ಮೇಲುಗೈ; ಭಗವಂತ್ ಮನೆ ಎದುರು ಕುಣಿದು ಕುಪ್ಪಳಿಸಿದ ಕಾರ್ಯಕರ್ತರು..!
ಬಿಜೆಪಿಗೆ ಸೂಕ್ತ ಪೈಪೋಟಿ ನೀಡಲು ಪ್ರಾದೇಶಿಕ ಪಕ್ಷಗಳಿಂದ ಮಾತ್ರ ಸಾಧ್ಯ ಎಂಬುದು ಈ ಫಲಿತಾಂಶದಿಂದ ಸಾಬೀತಾಗಿದೆ. ಪಂಜಾಬ್ ಹಾಗೂ ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶ ನಮಗೆ ಸ್ಫೂರ್ತಿ ನೀಡಿದೆ. ಗೋವಾ, ಪಂಜಾಬ್ ನಲ್ಲಿ ಸರ್ಕಾರ ರಚನೆ ಮಾಡುತ್ತೇವೆ ಎಂಬ ವಿಶ್ವಾಸ ಕಾಂಗ್ರೆಸ್ ಗೆ ಇತ್ತು. ಕರ್ನಾಟಕದ ಸೂತ್ರದಾರರನ್ನು ಗೋವಾಗೆ ಕಳುಹಿಸಿ ಕಾಂಗ್ರೆಸ್ ಸಾಧಿಸಿದ್ದೇನು ? ಎಂದು ಟಾಂಗ್ ನೀಡಿದ್ದಾರೆ.