ಉತ್ತರ ಪ್ರದೇಶದ ಮಾಜಿ ಸಿಎಂಗಳಾದ ಮಾಯಾವತಿ, ಅಖಿಲೇಶ್ ಯಾದವ್ರಂತವರು ತಮ್ಮ ಅಧಿಕಾರಾವಧಿಯಲ್ಲಿ ನೋಯ್ಡಾಗೆ ಭೇಟಿ ನೀಡಲು ಹೆದರುತ್ತಿದ್ದರೆ, ಸಿಎಂ ಯೋಗಿ ಆದಿತ್ಯನಾಥ್ ಮಾತ್ರ ತಮ್ಮ ಅಧಿಕಾರಾವಧಿಯಲ್ಲಿ 2 ಬಾರಿ ನೋಯ್ಡಾಗೆ ಭೇಟಿ ನೀಡಿದ್ದಾರೆ. ನೋಯ್ಡಾ ಎಂಬುದು ಉತ್ತರ ಪ್ರದೇಶದ ಸಿಎಂಗಳ ಪಾಲಿಗೆ ಸಿಂಹ ಸ್ವಪ್ನವಿದ್ದಂತೆ.
ಯಾವ ಸಿಎಂ ತನ್ನ ಅಧಿಕಾರಾವಧಿಯಲ್ಲಿ ಗ್ರೇಟರ್ ನೋಯ್ಡಾಗೆ ಭೇಟಿ ನೀಡುತ್ತಾರೋ ಅವರು ಮತ್ತೆ ಯುಪಿಯಲ್ಲಿ ಅಧಿಕಾರದ ಗದ್ದುಗೆಯನ್ನು ಏರೋದಿಲ್ಲ ಎಂಬ ಮೂಢನಂಬಿಕೆಯಿದೆ. ಆದರೆ 29 ವರ್ಷಗಳ ಮೂಢ ನಂಬಿಕೆಯನ್ನು ಯೋಗಿ ಆದಿತ್ಯನಾಥ್ ಮುರಿದಿದ್ದಾರೆ.
1988ರಲ್ಲಿ ಅಂದಿನ ಯುಪಿ ಸಿಎಂ ವೀರ್ ಬಹಾದೂರ್ ನೋಯ್ಡಾಗೆ ಭೇಟಿ ನೀಡುತ್ತಿದ್ದಂತೆಯೇ ಅವರು ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ಎದುರಾಗಿತ್ತು. ಇದಾದ ಬಳಿಕ 2002-2007ರ ಅವಧಿಯಲ್ಲಿ ಸಿಎಂ ಆಗಿದ್ದ ಮಾಯಾವತಿ ಕೂಡ ನೋಯ್ಡಾಗೆ ಭೇಟಿ ನೀಡಿದ ಬಳಿಕ ಮುಂದಿನ ಬಾರಿಗೆ ಸಿಎಂ ಆಗಿ ಆಯ್ಕೆಯಾಗಿರಲಿಲ್ಲ.
ಜನಸ್ನೇಹಿ ಆಡಳಿತ ಹಾಗೂ ನಿಷ್ಠಾವಂತ ರಾಜಕಾರಣವನ್ನು ಮಾಡಿದರೆ ನೋಯ್ಡಾಗೆ ಭೇಟಿ ನೀಡಿದ ಬಳಿಕವೂ ಮತ್ತೊಮ್ಮೆ ಉತ್ತರ ಪ್ರದೇಶದ ಚುಕ್ಕಾಣಿಯನ್ನು ಹಿಡಿಯಬಹುದು ಎಂಬ ಮಾತನ್ನು ಯೋಗಿ ಆದಿತ್ಯನಾಥ್ ಇಂದು ಸಾಬೀತುಪಡಿಸಿದ್ದಾರೆ.