ಏಳು ಹಂತದಲ್ಲಿ ಚುನಾವಣೆ ನಡೆದ, ಭಾರತದ ಅತಿ ದೊಡ್ಡ ರಾಜ್ಯ ಉತ್ತರಪ್ರದೇಶದ ಫಲಿತಾಂಶ ಇಂದು ಪ್ರಕಟವಾಗಲಿದೆ. ಆರಂಭಿಕ ಟ್ರೆಂಡ್‌ನಲ್ಲಿ ಬಿಜೆಪಿ ಪಕ್ಷ ಗೆಲುವಿನ ಗದ್ದುಗೆಯತ್ತ ಸಾಗುತ್ತಿದೆ.
ಮೊದಲ ಬಾರಿ ಗೋರಕ್ಪುರ ಕ್ಷೇತ್ರದಿಂದ ವಿಧಾನಸಭಾ ಕಣಕ್ಕಿಳಿದಿರುವ ಯೋಗಿ ಆದಿತ್ಯನಾಥ್ ಕೂಡ ಅಭೂತಪೂರ್ವ ಗೆಲುವಿನತ್ತ ಮುನ್ನುಗ್ಗುತ್ತಿದ್ದಾರೆ. ಗೆಲುವು ಖಚಿತವಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ ಜೋರಾಗಿದೆ. ಲಕ್ನೋದಲ್ಲಿರುವ ಪಕ್ಷದ ಕಚೇರಿಯೆದುರು ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿದ್ದು ತಮ್ಮ ನಾಯಕನ ಗೆಲುವಿಗೆ ಕುಣಿದು ಕುಪ್ಪಳಿಸಿದ್ದಾರೆ.
ಲಕ್ನೋದ ಬೀದಿಗಳೆಲ್ಲವು ಕೇಸರಿ ಬಣ್ಣದಿಂದ ತುಂಬಿ ಹೋಗಿದೆ. ಕೇಸರಿ ಬಣ್ಣ ಹಚ್ಚಿಕೊಂಡ ಕಾರ್ಯಕರ್ತರು ಗೆಲುವಿನ ಹೋಳಿಯಲ್ಲಿ ಸಂತೋಷದಿಂದ ಮುಳುಗಿ ಹೋಗಿದ್ದಾರೆ. ಸಧ್ಯ ಬಿಜೆಪಿಯು 270 ಕ್ಷೇತ್ರಗಳಲ್ಲಿ ಭಾರೀ ಮುನ್ನಡೆಯಲ್ಲಿದೆ. ಇತ್ತ ಸಮಾಜವಾದಿ ಮೈತ್ರಿ ಪಕ್ಷ 124 ಕ್ಷೇತ್ರಗಳ ಮೂಲಕ ಎರಡನೇ ದೊಡ್ಡ ಪಕ್ಷದ ಸ್ಥಾನದಲ್ಲಿದೆ. ಆದರೆ ಕಾಂಗ್ರೆಸ್ ಹಾಗೂ ಬಿಎಸ್ಪಿ ಒಂದಂಕಿಯಲ್ಲಿ ತೆವಳುತ್ತಿವೆ.
ಬಿಜೆಪಿ ಗೆಲುವಿನ ಮೂಲಕ ಉತ್ತರ ಪ್ರದೇಶದ ಇತಿಹಾಸದಲ್ಲೇ ಒಂದು ಪೂರ್ಣ ಟರ್ಮ್ ಮುಗಿಸಿ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ದಾಖಲೆ ಯೋಗಿ ಆದಿತ್ಯನಾಥ್ ಪಾಲಾಗಿದೆ.