alex Certify BIG NEWS: ಇವಿಎಂ ಟ್ಯಾಂಪರಿಂಗ್​ ಆರೋಪವನ್ನು ತಳ್ಳಿ ಹಾಕಿದ ಚುನಾವಣಾ ಆಯೋಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಇವಿಎಂ ಟ್ಯಾಂಪರಿಂಗ್​ ಆರೋಪವನ್ನು ತಳ್ಳಿ ಹಾಕಿದ ಚುನಾವಣಾ ಆಯೋಗ

 

ಇವಿಎಂ ಟ್ಯಾಂಪರಿಂಗ್​ ಆರೋಪ ತಳ್ಳಿ ಹಾಕಿರುವ ಮುಖ್ಯ ಚುನಾವಣಾ ಆಯುಕ್ತ ಸುಶೀಲ್​ ಚಂದ್ರ, ಯಾವುದೇ ಇವಿಎಂ ಮಷಿನ್​ಗಳನ್ನು ಸ್ಟ್ರಾಂಗ್​ ರೂಮ್​​ನಿಂದ ಹೊರ ತೆಗೆಯುವಂತಿಲ್ಲ ಎಂದು ಹೇಳಿದ್ದಾರೆ. ಇವಿಎಂಗಳ ಚಲನೆಯ ಬಗ್ಗೆ ರಾಜಕೀಯ ಪಕ್ಷಗಳಿಗೆ ಮೊದಲೇ ಮಾಹಿತಿ ನೀಡಿರುವುದು ವಾರಣಾಸಿ ಎಡಿಎಂ ಮಾಡಿದ ತಪ್ಪಾಗಿದೆ ಎಂದು ಹೇಳಿದರು.

ವಾರಣಾಸಿಯಲ್ಲಿ ಇವಿಎಂಗಳನ್ನು ಸಾಗಿಸಲಾಗುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್​ ಯಾದವ್​ ಆರೋಪ ಮಾಡಿರುವ ಬೆನ್ನಲ್ಲೇ ಸುಶೀಲ್​ ಚಂದ್ರ ಈ ಹೇಳಿಕೆ ನೀಡಿದ್ದಾರೆ. ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್​​ ಸ್ಥಳೀಯ ಅಭ್ಯರ್ಥಿಗಳ ಯಾವುದೇ ಮಾಹಿತಿ ನೀಡದೇ ಇವಿಎಂಗಳನ್ನು ಸಾಗಿಸುತ್ತಿದ್ದಾರೆ ಎಂದು ಅಖಿಲೇಶ್​ ಯಾದವ್​ ಆರೋಪಿಸಿದ್ದರು. ಅಲ್ಲದೆ ಈ ಬಗ್ಗೆ ಚುನಾವಣಾ ಆಯೋಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದರು.

ಇವಿಎಂ ಟ್ಯಾಂಪರಿಂಗ್​ ಮಾಡುವ ಪ್ರಶ್ನೆಯೇ ಇಲ್ಲ. ಇವಿಎಂಗಳನ್ನು ನಿರಂತರವಾಗಿ 2004ರಿಂದ ಬಳಸಲಾಗುತ್ತಿದೆ. 2019ರಲ್ಲಿ ನಾವು ಪ್ರತಿ ಮತಗಟ್ಟೆಗಳಲ್ಲಿ ವಿವಿಪ್ಯಾಟ್​ಗಳನ್ನು ಬಳಸುತ್ತಿದ್ದೇವೆ. ರಾಜಕೀಯ ಪಕ್ಷದ ಏಜೆಂಟರ ಸಮ್ಮುಖದಲ್ಲಿ ಇವಿಎಂಗಳನ್ನು ಸೀಲ್​ ಮಾಡಲಾಗಿದೆ ಎಂದು ಸುಶೀಲ್​ ಚಂದ್ರ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...