ಕ್ರೊಯೇಷಿಯಾದ ಫ್ರೀಡೈವರ್ ವಿಟೊಮಿರ್ ಮಾರಿಸಿಕ್ ಎಂಬಾತ ಒಂದೇ ಉಸಿರಿನಲ್ಲಿ 107 ಮೀಟರ್ ನೀರಿನಾಳದಲ್ಲಿ ನಡೆದು ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ವಿಟೊಮಿರ್ ಅವರು ಒಟ್ಟು 107 ಮೀಟರ್ (351 ಅಡಿ 0.5 ಇಂಚುಗಳಷ್ಟು) ನೀರಿನ ಅಡಿಯಲ್ಲಿ ಒಂದೇ ಉಸಿರಿನಲ್ಲಿ ನಡೆಯುವ ಮೂಲಕ ಹೊಸ ದಾಖಲೆಗೆ ಪಾತ್ರರಾಗಿದ್ದಾರೆ. ಮಾರ್ಚ್ 2020 ರಲ್ಲಿ 96 ಮೀಟರ್ ನಡೆದಿದ್ದ ಸಹವರ್ತಿ ಫ್ರೀಡೈವರ್ ಬೋರಿಸ್ ಮಿಲೋಸಿಕ್ ಅವರ ಹಿಂದಿನ ದಾಖಲೆಯನ್ನು ವಿಟೊಮಿರ್ ಮುರಿದಿದ್ದಾರೆ.
ಫ್ರೀಡೈವಿಂಗ್ ಕುರಿತು ಹೃದಯ, ಶ್ವಾಸಕೋಶ ಮತ್ತು ಸಂಧಿವಾತ ಕಾಯಿಲೆಗಳ ಪುನರ್ವಸತಿ ಆಸ್ಪತ್ರೆ ಮಾಡುತ್ತಿರುವ ಸಂಶೋಧನೆಯ ಬಗ್ಗೆ ಜಾಗೃತಿ ಮೂಡಿಸಲು ಅವರು ಇದನ್ನು ಮಾಡಲು ಬಯಸಿದ್ದರು. ಇದು ಕ್ರೀಡೆ ಮತ್ತು ಅದರ ಸುರಕ್ಷತೆಯನ್ನು ರೂಪಿಸಲು ಸಹಾಯ ಮಾಡುತ್ತದೆ. ಹಾಗೆಯೇ ವೈದ್ಯಕೀಯ ಕ್ಷೇತ್ರಕ್ಕೂ ಪ್ರಯೋಜನವನ್ನು ನೀಡುತ್ತದೆ ಎಂದು ಅವರು ಹೇಳಿದ್ದಾರೆ.
ವಿಟೊಮಿರ್ ಒಟ್ಟು 3 ನಿಮಿಷ ಮತ್ತು 6 ಸೆಕೆಂಡುಗಳ ಕಾಲ ನೀರಿನ ಅಡಿಯಲ್ಲಿ ತನ್ನ ಉಸಿರನ್ನು ಬಿಗಿ ಹಿಡಿದಿದ್ದರು. ಅಲ್ಲದೆ, ಅವರು 50 ಮೀಟರ್ ಪೂಲ್ನ ಎರಡು ಸುತ್ತುಗಳನ್ನು ಪೂರ್ಣಗೊಳಿಸಿದ್ದಾರೆ. ವೃತ್ತಿಪರ ಫ್ರೀಡೈವರ್ ಆಗಿ ತಾನು ಯಾವುದೇ ಉಸಿರಾಟವನ್ನು ಹಿಡಿದಿಟ್ಟುಕೊಳ್ಳುವ ದಾಖಲೆಗಾಗಿ ನಿಜವಾಗಿಯೂ ಹೆಚ್ಚು ತಯಾರಿ ಮಾಡುವ ಅಗತ್ಯವಿಲ್ಲ ಎಂದು ವಿಟೊಮಿರ್ ಹೇಳಿದ್ದಾರೆ.
ವಿಟೊಮಿರ್ ವೃತ್ತಿಜೀವನವನ್ನು ಪ್ರಾರಂಭಿಸಿದ ಕೇವಲ ಒಂದು ವರ್ಷದ ನಂತರ, ಅವರು 2019ರಲ್ಲಿ ಕ್ರೊಯೇಷಿಯಾದ ಸಿಎಂಎಎಸ್ ನ್ಯಾಷನಲ್ ಪೂಲ್ ಫ್ರೀಡೈವಿಂಗ್ ಚಾಂಪಿಯನ್ಶಿಪ್ನಲ್ಲಿ ಬೈ-ಫಿನ್ಸ್ ವಿಶ್ವ ದಾಖಲೆಯನ್ನು ಸಾಧಿಸಿದ್ದರು.
ಇದಲ್ಲದೆ, ಕಳೆದ ವರ್ಷ ಸೈಪ್ರಸ್ನ ಲಿಮಾಸೋಲ್ನಲ್ಲಿ ನಡೆದ 2021ರ ಎಐಡಿಎ ಫ್ರೀಡೈವಿಂಗ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ವಿಟೊಮಿರ್ ಚಿನ್ನದ ಪದಕ ಮತ್ತು ಎರಡು ಕಂಚುಗಳನ್ನು ಗೆದ್ದಿದ್ದಾರೆ.