ಮುಂಬೈ ಪೊಲೀಸರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಸದಾ ತಮಾಷೆಯ ಪೋಸ್ಟ್ಗಳನ್ನೇ ಶೇರ್ ಮಾಡುತ್ತಾರೆ. ಈ ಪೋಸ್ಟ್ಗಳು ನಗುವಿನ ಕಚಗುಳಿ ಇಡುವ ಜೊತೆಯಲ್ಲಿ ಒಂದು ಸಂದೇಶವನ್ನೂ ನೀಡುತ್ತದೆ.
ಆದರೆ ಈ ಬಾರಿ ಮುಂಬೈ ಪೊಲೀಸ್ ಇಲಾಖೆ ಶೇರ್ ಮಾಡಿದ ಪೋಸ್ಟ್ ಮನಸ್ಸನ್ನು ಹಿಂಡುವಂತಿತ್ತು. ಹೌದು..! ತಮ್ಮ ಇತ್ತೀಚಿನ ಪೋಸ್ಟ್ನಲ್ಲಿ ಪೊಲೀಸ್ ಇಲಾಖೆಯು ಕೆ 9 ಸ್ಕ್ವಾಡ್ನ ಭಾಗವಾಗಿದ್ದ ಸಿಂಬಾ ಎಂಬ ನಾಯಿಗೆ ಭಾವನಾತ್ಮಕವಾಗಿ ಅಂತಿಮ ವಿದಾಯವನ್ನು ಸಲ್ಲಿಸಿದೆ. ಈ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವೈರಲ್ ವಿಡಿಯೋದಲ್ಲಿ ಸಿಂಬಾ ಮೃತದೇಹಕ್ಕೆ ಹೂವಿನ ಹಾರಗಳನ್ನು ಹಾಕಿರುವುದನ್ನು ಕಾಣಬಹುದಾಗಿದೆ. ಪೊಲೀಸರು ಸಕಲ ಸರ್ಕಾರಿ ಗೌರವಗಳೊಂದಿಗೆ ಶ್ವಾನದ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ ಸಿಂಬಾ. ನೀನು ನಮ್ಮ ಉತ್ತಮ ಒಡನಾಡಿ ಹಾಗೂ ರಕ್ಷಕ ಎಂದು ಶೀರ್ಷಿಕೆ ನೀಡಲಾಗಿದೆ. ಅಲ್ಲದೇ ಮರಾಠಿ ಭಾಷೆಯಲ್ಲಿಯೂ ಕೆಲವು ಸಾಲುಗಳನ್ನು ಬರೆಯಲಾಗಿದೆ.