ರಷ್ಯಾ ಹಾಗೂ ಉಕ್ರೇನ್ ನಡುವಿನ ರಣಭೀಕರ ಯುದ್ಧ ನಿಲ್ಲುವ ಲಕ್ಷಣ ಕಾಣಿಸುತ್ತಿಲ್ಲ. ಯುದ್ಧದ ಭೀತಿಯಿಂದ ಉಕ್ರೇನ್ ಮಂದಿ ಹಾಗೂ ಉಕ್ರೇನ್‌ನಲ್ಲಿ ನೆಲೆಸಿರುವ ಅನ್ಯ ದೇಶದವರು ಊರು ಬಿಡುತ್ತಿದ್ದಾರೆ. ಈ ಸಂದರ್ಭದಲ್ಲಿ ಉಕ್ರೇನ್‌ನಲ್ಲಿನ ಸಾಕಷ್ಟು ಮನಕಲುಕುವ ವಿಡಿಯೋಗಳು ವೈರಲ್ ಆಗುತ್ತಿವೆ, ಇದೇ ವೇಳೆ ಯುದ್ಧಪೀಡಿತ ಉಕ್ರೇನ್‌ನ ಸುಂದರ ವಿಡಿಯೋವೊಂದು ವೈರಲ್ ಆಗಿದೆ.
ಉಕ್ರೇನ್ ಸೈನಿಕನೊಬ್ಬ ಮಿಲಿಟರಿ ಚೆಕ್ ಪಾಯಿಂಟ್ನಲ್ಲಿ ಮಂಡಿಯೂರಿ ಗೆಳತಿಗೆ ಪ್ರಪೋಸ್ ಮಾಡಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜನರ ಸಾವು, ನೋವು, ಭಯದಲ್ಲಿ ಬದುಕುತ್ತಿರುವುದರ ನಡುವೆಯೂ ಈ ರೀತಿ ಪ್ರೇಮ ನಿವೇದನೆ ಮಾಡಿರುವುದು ಎಲ್ಲರ ಹೃದಯವನ್ನು ಸ್ಪರ್ಶಿಸಿದೆ.
ವಿಡಿಯೋದಲ್ಲಿ ಉಕ್ರೇನ್ ನಾಗರಿಕರನ್ನು ಮಿಲಿಟರಿ ಚೆಕ್ ಪಾಯಿಂಟ್ನಲ್ಲಿ ತಪಾಸಣೆ ಮಾಡಲು ನಿಲ್ಲಿಸಲಾಗಿತ್ತು. ಈ ವೇಳೆ ಸೈನಿಕರ ಗುಂಪು ಅವರನ್ನು ತಪಾಸಣೆ ಮಾಡುತ್ತಿತ್ತು. ಗಾಡಿಯೆಡೆಗೆ ಮುಖ ಮಾಡಿ ನಿಂತಿದ್ದ ಯುವತಿಯನ್ನು ತಿರುಗಿಸಿ ಸೈನಿಕನೊಬ್ಬ ಮಂಡಿಯೂರಿ ಪ್ರಪೋಸ್ ಮಾಡಿದ್ದಾನೆ. ಇದನ್ನು ಕಂಡು ಆಕೆ ಅಚ್ಚರಿಗೊಂಡಿದ್ದಾಳೆ. ಪುಟ್ಟ ಹೂವನ್ನು ನೀಡಿ ಸೈನಿಕ ಪ್ರೇಮ ನಿವೇದನೆ ಮಾಡಿದ್ದಾನೆ.
BIG NEWS: NEET UG ಪರೀಕ್ಷೆಗೆ ಗರಿಷ್ಠ ವಯೋಮಿತಿ ಕೈಬಿಟ್ಟ ಸರ್ಕಾರ
ಅಷ್ಟಕ್ಕೂ ಅವರಿಬ್ಬರು ಮೊದಲಿನಿಂದ ಗೆಳೆಯ – ಗೆಳತಿಯರಾಗಿದ್ದರು. ತನ್ನ ಗೆಳತಿಯನ್ನು ಚೆಕ್ ಪಾಯಿಂಟ್ನಲ್ಲಿ ನೋಡಿದ ಸೈನಿಕ ಆಕೆಗೆ ಪ್ರಪೋಸ್ ಮಾಡಿದ್ದಾನೆ. ಇದನ್ನು ನಿರೀಕ್ಷಿಸಿರದ ಆಕೆ ಖುಷಿಯ ಜೊತೆಗೆ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾಳೆ.
ಆತನ ಪ್ರಪೋಸಲ್ ಒಪ್ಪಿಕೊಂಡ ಆಕೆ, ಸೈನಿಕ ಗೆಳೆಯನಿಗೆ ರಿಂಗ್ ತೊಡಿಸಲು ಅನುಮತಿ ನೀಡಿದಳು. ನಂತರ ಆತನನ್ನು ಹಗ್ ಮಾಡಿಕೊಂಡಿದ್ದಾಳೆ.
ಅಲ್ಲಿದ್ದವರು ಸಹ ಇವರ ಪ್ರೀತಿಗೆ ಜೈಕಾರ ಹಾಕಿದ್ದಾರೆ. ಸಿಬಿಎಸ್ ನ ಮಿಯಾಮಿ ಆ್ಯಂಕರ್, ಕೆಂಡಿಸ್ ಗಿಬ್ಸನ್ ಇದನ್ನು ತಮ್ಮ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದ್ದು ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.