alex Certify ಈ ವಿಡಿಯೋ ನೋಡಿದ್ರೆ ನೀವು ಬಿದ್ದು ಬಿದ್ದು ನಗ್ತೀರಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ವಿಡಿಯೋ ನೋಡಿದ್ರೆ ನೀವು ಬಿದ್ದು ಬಿದ್ದು ನಗ್ತೀರಾ..!

Viral Video: Snake Charmer Plays Flute In Front of Shop, What Happened Next Will Leave You Laughing | Watchಇಂಟರ್ನೆಟ್ ನಲ್ಲಿ ಕೆಲವು ಆಸಕ್ತಿದಾಯಕ ಮತ್ತು ತಮಾಷೆಯ ವಿಡಿಯೋಗಳು ಹೆಚ್ಚಾಗಿ ವೈರಲ್ ಆಗುತ್ತಿರುತ್ತವೆ. ಇದು ನೆಟ್ಟಿಗರಿಗೆ ಒಳ್ಳೆಯ ಮನರಂಜನೆಯನ್ನು ಕೂಡ ನೀಡುತ್ತದೆ. ಅಂತಹ ಒಂದು ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಹಾವುಗಳನ್ನು ಸೆಳೆಯಲು ಪುಂಗಿ ಊದುವ ವ್ಯಕ್ತಿಯೊಬ್ಬ ಅಂಗಡಿಯೊಂದರ ಮುಂದೆ ಬಂದು ನಿಂತಾಗ ಏನಾಯ್ತು ಎಂಬುದನ್ನು ವಿಡಿಯೋ ತೋರಿಸುತ್ತದೆ. ಈ ವಿಡಿಯೋ ನೋಡಿದ್ರೆ ಖಂಡಿತಾ ನೀವು ಬಿದ್ದು ಬಿದ್ದು ನಗೋದ್ರಲ್ಲಿ ಸಂಶಯವೇ ಇಲ್ಲ.

ಅಂಗಡಿಯೊಂದರ ಮುಂದೆ ಹಾವು ಮೋಡಿಗಾರ ಪುಂಗಿ ಊದಿದ್ದಾನೆ. ಹಾವನ್ನು ಹೊರಗೆ ಸೆಳೆಯಲು ಈತನನ್ನು ಅಲ್ಲಿಗೆ ಕರೆಸಿರಬಹುದು ಎಂದು ಊಹಿಸಬಹುದು. ಆತ ಹಾವಿಗಾಗಿ ಪುಂಗಿ ಊದಿದ್ರೆ, ವ್ಯಕ್ತಿಯೊಬ್ಬ ನಾಗಿಣಿ ನೃತ್ಯ ಮಾಡುತ್ತಾ ಅಂಗಡಿಯಿಂದ ಹೊರಗೆ ಬಂದಿದ್ದಾನೆ. ಹಾವು ಮೋಡಿಗಾರ ಬಹಳ ಹೊತ್ತು ಪುಂಗಿ ಊದುವುದನ್ನು ಮುಂದುವರೆಸಿದ್ದಾನೆ. ವ್ಯಕ್ತಿ ಕೂಡ ಪುಂಗಿಗೆ ತಕ್ಕ ರೀತಿಯಲ್ಲಿ  ನಾಗಿಣಿ ಡಾನ್ಸ್ ಮಾಡುತ್ತಾ ಆತನ ಬಳಿ ಬಂದು, ಬುಸುಗುಟ್ಟುವಂತೆ ಮಾಡಿದ್ದಾನೆ. ಈತನ ಹುಚ್ಚು ವರ್ತನೆಯನ್ನು ಕಂಡು ಹಾವು ಮೋಡಿಗಾರ ಅಲ್ಲಿಂದ ಓಡಿ ಹೋಗಿದ್ದಾನೆ.

35 ಸೆಕೆಂಡುಗಳ ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಸಾವಿರಾರು ಮಂದಿ ಈ ವಿಡಿಯೋ ವೀಕ್ಷಿಸಿದ್ದು, ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ಕಾಮೆಂಟ್ ವಿಭಾಗವು ನಗುವಿನ ಎಮೋಜಿಯಲ್ಲಿ ತುಂಬಿದೆ.

https://www.youtube.com/watch?v=Xrb77fmrORg

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...