
ಬೆಂಗಳೂರು: ಮುರಗೋಡ ಸಬ್ ರಿಜಿಸ್ಟ್ರಾರ್, ಬಾಂಡ್ ರೈಟರ್ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ. ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುರಗೋಡದಲ್ಲಿ ಪಿತ್ರಾರ್ಜಿತ ಆಸ್ತಿ ಪರಭಾರೆ ದಾಖಲೆ ನೀಡಲು ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಸಬ್ ರಿಜಿಸ್ಟ್ರಾರ್ ಸಂಜೀವ್, ಬಾಂಡ್ ರೈಟರ್ ಶಿವಯೋಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
4 ಸಾವಿರ ರೂಪಾಯಿಗಳನ್ನು ಶಿವಪ್ಪ ಅವರಿಂದ ಸ್ವೀಕರಿಸುತ್ತಿದ್ದರು. ಈ ಬಗ್ಗೆ ದೂರುದಾರರಿಂದ ಮಾಹಿತಿ ಪಡೆದ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ನಿವೇಶನ ಖಾತೆ ನೀಡಲು ಲಂಚ, ಇಬ್ಬರು ವಶಕ್ಕೆ
ನಿವೇಶನ ಖಾತೆ ನೀಡಲು ಲಂಚ ಸ್ವೀಕರಿಸುತ್ತಿದ್ದ ವೇಳೆ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ನಿವೇಶನ ಖಾತೆ ನೀಡಲು 10 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಚಿಕ್ಕಬಾಣಾವರ ಪುರಸಭೆ ಕಚೇರಿ ಸಿಬ್ಬಂದಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಚಿಕ್ಕಬಾಣಾವರ ಪುರಸಭೆ ಕಚೇರಿಯ ಸಿಬ್ಬಂದಿ ಶಂಕರ್ ವಶಕ್ಕೆ ಪಡೆಯಲಾಗಿದೆ ಆಸಿಫ್ ಅನ್ವರ್ ಎಂಬುವರ ಬಳಿ 20000 ಲಂಚಕ್ಕೆ ಬೇಡಿಕೆ ಇಟ್ಟಿದ್ದು ಮುಂಗಡವಾಗಿ 15000 ಶಂಕರ್ ಪಡೆದಿದ್ದರು. ಇಂದು 10,000 ರೂಪಾಯಿ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.