alex Certify ಮದುವೆಯಲ್ಲಿ ಧರಿಸಿದ್ದ ಸೀರೆಯನ್ನ ಮಾಜಿ ಪತಿಗೆ ವಾಪಸ್ ನೀಡಿದ್ರಾ ಸಮಂತಾ…? ಇದರ ಹಿಂದಿದೆಯಂತೆ ಒಂದು ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯಲ್ಲಿ ಧರಿಸಿದ್ದ ಸೀರೆಯನ್ನ ಮಾಜಿ ಪತಿಗೆ ವಾಪಸ್ ನೀಡಿದ್ರಾ ಸಮಂತಾ…? ಇದರ ಹಿಂದಿದೆಯಂತೆ ಒಂದು ಕಾರಣ

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿ, ವಿಚ್ಛೇದನ ಪಡೆಯುವುದಾಗಿ ಘೋಷಿಸಿದ್ದರು.

ತಮ್ಮ ಫೇವರಿಟ್ ಜೋಡಿ ಪ್ರತ್ಯೇಕವಾಗಿರುವುದನ್ನ ಅವರ ಅಭಿಮಾನಿಗಳು ಈಗಲೂ ಒಪ್ಪಿಕೊಳ್ಳಲು ತಯಾರಿಲ್ಲ. ಹಲವರಂತು ಅವರಿಬ್ಬರು ಮತ್ತೆ ಒಂದಾಗಲಿ ಎಂದು ಬಯಸುತ್ತಿದ್ದಾರೆ. ಇದೆಲ್ಲದರ ನಡುವೆ ಟಿ-ಟೌನ್ ನಲ್ಲಿ ಈ ಜೋಡಿಗೆ ಸಂಬಂಧಿಸಿದ ಮತ್ತೊಂದು ವಿಚಾರ ಸದ್ದು ಮಾಡುತ್ತಿದೆ.

ಪ್ರತ್ಯೇಕವಾದ ನಂತರ, ನಟಿ ಸಮಂತಾ ತನ್ನ ಮದುವೆಯ ವೇಳೆ ಧರಿಸಿದ್ದ ಸೀರೆಯನ್ನು ನಾಗಚೈತನ್ಯಗೆ ಹಿಂದಿರುಗಿಸಿದ್ದಾರೆ ಎನ್ನಲಾಗಿದೆ. ವರದಿಯ ಪ್ರಕಾರ, ಸಮಂತಾ ತನ್ನ ಮದುವೆಯಲ್ಲಿ ಧರಿಸಿದ್ದ ಸೀರೆ ನಾಗಚೈತನ್ಯ ಅಜ್ಜಿಗೆ ಸೇರಿದೆ.

ಮಾಜಿ ದಂಪತಿಗಳು 2017 ರಲ್ಲಿ ಗೋವಾದಲ್ಲಿ ಮದುವೆಯಾಗಿದ್ದರು, ಆ ಸಮಯದಲ್ಲಿ ಸಮಂತಾ, ನಾಗಚೈತನ್ಯ ಅವರ ಅಜ್ಜಿಯ ಸೀರೆ ಧರಿಸಿದ್ದರು. ಇದರಿಂದ ಇಬ್ಬರ ಕುಟುಂಬ ಹೆಮ್ಮೆ ಪಟ್ಟಿತ್ತು ಎನ್ನಲಾಗಿದೆ. ಈಗ ಅದೇ ಸೀರೆಯನ್ನು ಸಮಂತಾ ಹಿಂದಿರುಗಿಸಿದ್ದಾರೆ ಎಂದು ವರದಿಯಾಗಿದೆ.

ಪಾರ್ಟಿ ಬಳಿಕ ತೆಪ್ಪದಲ್ಲಿ ರೌಂಡ್ಸ್ ಹಾಕುವಾಗಲೇ ದುರಂತ; ಮೂವರು ನೀರುಪಾಲು

ನಾಗಚೈತನ್ಯ ಅಥವಾ ಆತನ ಕುಟುಂಬಕ್ಕೆ ಸೇರಿದ ಯಾವುದೇ ವಸ್ತುವನ್ನು ತನ್ನ ಬಳಿ ಇಟ್ಟುಕೊಳ್ಳಲು ಸಮಂತಾಗೆ ಇಷ್ಟವಿಲ್ಲ ಎಂದು ಹೇಳಲಾಗುತ್ತಿದೆ. ಅವರ ಪ್ರತ್ಯೇಕತೆಯ ನಂತರ ಸಮಂತಾ, ನಾಗಚೈತನ್ಯ ಅವರಿಂದ ಯಾವುದೇ ಹಣವನ್ನು ತೆಗೆದುಕೊಳ್ಳಲು ಬಯಸುವುದಿಲ್ಲ ಎಂದು ಹೇಳಿ 200 ಕೋಟಿ ರೂ. ಜೀವನಾಂಶವನ್ನು ಪಡೆಯಲು ನಿರಾಕರಿಸಿದರು ಎಂದು ವರದಿಯಾಗಿತ್ತು, ಇದಕ್ಕೆ ಯಾವುದೇ ಅಧಿಕೃತ ದೃಢೀಕರಣ ಇಲ್ಲವಾದರು ಈ ಸಮಯದಲ್ಲಿ ಈ ವಿಚಾರ ಮತ್ತೆ ಸದ್ದು ಮಾಡುತ್ತಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...