
ಇತ್ತೀಚೆಗೆ ಮೊಹಾಲಿಯಲ್ಲಿ ಶ್ರೀಲಂಕಾದ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಆಲ್ ರೌಂಡರ್ ರವೀಂದ್ರ ಜಡೇಜಾ ವಿಶ್ವದಾಖಲೆ ಬರೆದಿದ್ದಾರೆ. ಐಸಿಸಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಉತ್ತಮ ಅಂಕ ಪಡೆದಿರುವ ಜಡೇಜಾ ನಂ 1 ಸ್ಥಾನಕ್ಕೇರಿದ್ದಾರೆ.
ಶ್ರೀಲಂಕಾದ ವಿರುದ್ಧದ ಪಂದ್ಯದಲ್ಲಿ ಅಜೇಯ 175 ರನ್ ಹಾಗೂ 9 ವಿಕೆಟ್ ಗಳ ನೆರವಿನಿಂದಾಗಿ ಅವರು ಅಗ್ರಸ್ಥಾನಕ್ಕೆ ಏರಿದ್ದಾರೆ. ಈ ಇನ್ನಿಂಗ್ಸ್ ಅನ್ನು ಜಡೇಜಾ ವೃತ್ತಿಜೀವನದ ಅತ್ಯುತ್ತಮ ಪರ್ಫಾಮೆನ್ಸ್ ಎನ್ನಲಾಗಿದೆ.
ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಜಡೇಜಾ ಮತ್ತೊಂದು ದಾಖಲೆ ಬರೆದಿದ್ದಾರೆ. ಒಬ್ಬ ಆಲ್ ರೌಂಡರ್ ಟೆಸ್ಟ್ ಪಂದ್ಯದಲ್ಲಿ 9 ವಿಕೆಟ್ ಗಳೊಂದಿಗೆ, 150 ರನ್ ಗಳಿಗಿಂತ ಹೆಚ್ಚು ನಂಬರ್ಸ್ ಕಲೆಕ್ಟ್ ಮಾಡಿಲ್ಲ. ಆದರೆ ಈಗ ಜಡೇಜಾ ಹೊಸ ವಿಶ್ವ ದಾಖಲೆ ಬರೆದಿದ್ದಾರೆ.
ಐಸಿಸಿಯ ಆಲ್ ರೌಂಡರ್ ರ್ಯಾಂಕಿಂಗ್ ನಲ್ಲಿ 406 ಅಂಕಗಳನ್ನು ಪಡೆದಿರುವ ಜಡೇಜಾ ಮೊದಲನೇ ಸ್ಥಾನದಲ್ಲಿದ್ದಾರೆ. 382 ಅಂಕಗಳನ್ನು ಪಡೆದಿರುವ ಜೇಸನ್ ಹೋಲ್ಡರ್ ಎರಡನೇ ಸ್ಥಾನದಲ್ಲಿದ್ದಾರೆ. ಭಾರತದ ಮತ್ತೊಬ್ಬ ದಿಗ್ಗಜ ಆಟಗಾರ ರವಿಚಂದ್ರನ್ ಅಶ್ವಿನ್ ಆಲ್ ರೌಂಡರ್ ಲಿಸ್ಟ್ ನಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಇತ್ತ ನೂರು ಟೆಸ್ಟ್ ಪಂದ್ಯಗಳನ್ನಾಡಿ ದಾಖಲೆ ಬರೆದಿರುವ ವಿರಾಟ್ ಕೊಹ್ಲಿ, ಬ್ಯಾಟ್ಸ್ ಮನ್ ರ್ಯಾಂಕಿಗ್ ನಲ್ಲಿ ಐದನೇ ಸ್ಥಾನಕ್ಕೆ ಜಿಗಿದಿದ್ದಾರೆ.