ವಿಶ್ರಾಂತಿ ಮೂಡ್ ನಲ್ಲಿ ಪಂಜಾಬ್ ಸಿಎಂ; ಮೇಕೆ ಹಾಲು ಕರೆದ ಚರಣ್ಜೀತ್ ಸಿಂಗ್ ಚನ್ನಿ 09-03-2022 5:58PM IST / No Comments / Posted In: India, Featured News, Live News ಪಂಜಾಬ್ ವಿಧಾನಸಭಾ ಚುನಾವಣೆಯ ಮತಗಟ್ಟೆಯ ಸಮೀಕ್ಷೆಗಳು ಈ ಬಾರಿ ಆಮ್ ಆದ್ಮಿ ಪಕ್ಷವು ರಾಜ್ಯದ ಚುಕ್ಕಾಣಿಯನ್ನು ಹಿಡಿಯಲಿವೆ ಎಂದು ಅಂದಾಜಿಸಿವೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಪಂಜಾಬ್ ಸಿಎಂ ಚರಣ್ಜೀತ್ ಸಿಂಗ್ ಚನ್ನಿ, ಲಾಕ್ ಆಗಿರುವ ಇವಿಎಂಗಳು ನಿಜವಾದ ಫಲಿತಾಂಶ ಏನು ಎಂಬುದನ್ನು ಮಾರ್ಚ್ 10ನೇ ತಾರೀಖಿನಂದು ತಿಳಿಯಲಿದೆ. ಅಲ್ಲಿಯವರೆಗೆ ಕಾಯಿರಿ ಎಂದು ಹೇಳಿದ್ದಾರೆ. ನಾಳೆಯ ಚುನಾವಣಾ ಫಲಿತಾಂಶದ ಟೆನ್ಶನ್ ನಡುವೆಯೇ ಪಂಜಾಬ್ ಸಿಎಂ ಚರಣ್ಜೀತ್ ಸಿಂಗ್ ಚನ್ನಿ ಮೇಕೆಯ ಹಾಲನ್ನು ಕರೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಚರಣ್ಜೀತ್ ಸಿಂಗ್ ಚನ್ನಿ ತಮ್ಮ ಅಮೂಲ್ಯ ಸಮಯವನ್ನು ಮೇಕೆ ಹಾಲು ಕರೆಯಲು ಏಕೆ ವ್ಯಯಿಸುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಮೇಕೆಯ ಹಾಲನ್ನು ಕರೆಯಲು ಮತದಾರರು ನಿಮ್ಮನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಿಲ್ಲ. ಮುಖ್ಯಮಂತ್ರಿಗಳ ಪ್ರತಿಯೊಂದು ನಿಮಿಷವೂ ಅಮೂಲ್ಯವಾಗಿರುತ್ತದೆ. ಉದ್ಯೋಗೀಕರಣ, ಶಿಕ್ಷಣದ ಗುಣಮಟ್ಟ ಹಾಗೂ ಮಾದಕ ದ್ರವ್ಯ ಸೇವನೆಯನ್ನು ನಿರ್ಬಂಧಿಸುವುದು ಹೀಗೆ ನಾನಾ ಸಮಸ್ಯೆಗಳತ್ತ ನೀವು ಗಮನಹರಿಸಬೇಕು ಎಂದು ನೆಟ್ಟಿಗರು ಕಮೆಂಟ್ ವಿಭಾಗದಲ್ಲಿ ಕಿಡಿಕಾರಿದ್ದಾರೆ. Village Ballo, Bhadaur pic.twitter.com/ZRGmklHTiT — Charanjit Singh Channi (@CHARANJITCHANNI) March 8, 2022