alex Certify ಕಂದಹಾರ್​ ವಿಮಾನ ಹೈಜಾಕ್​ ಪ್ರಕರಣದ ಪ್ರಮುಖ ಆರೋಪಿ ಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಂದಹಾರ್​ ವಿಮಾನ ಹೈಜಾಕ್​ ಪ್ರಕರಣದ ಪ್ರಮುಖ ಆರೋಪಿ ಹತ್ಯೆ

1999ರಲ್ಲಿ ಕಠ್ಮಂಡುವಿನಿಂದ ದೆಹಲಿಗೆ ಹೊರಟಿದ್ದ ಐಸಿ -814 ಇಂಡಿಯನ್ ಏರ್​ಲೈನ್ಸ್​ ವಿಮಾನವನ್ನು ಹೈಜಾಕ್​ ಮಾಡಿದವರಲ್ಲಿ ಒಬ್ಬನಾದ ಮಿಸ್ತ್ರಿ ಜಹೂರ್​​ ಇಬ್ರಾಹಿಂನ್ನು ಪಾಕಿಸ್ತಾನದ ಕರಾಚಿಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಸರ್ಕಾರಿ ಮೂಲಗಳು ಮಾಹಿತಿ ನೀಡಿವೆ.

ಮೂಲಗಳ ಪ್ರಕಾರ, ಜೈಶ್​ ಎ ಮೊಹಮ್ಮದ್​​ ಭಯೋತ್ಪಾದಕ ಕಳೆದ ಅನೇಕ ವರ್ಷಗಳಿಂದ ಜಾಹಿದ್​ ಅಖುಂಡ್​ ಎಂಬ ಸುಳ್ಳು ಗುರುತಿನ ಅಡಿಯಲ್ಲಿ ವಾಸಿಸುತ್ತಿದ್ದನು, ಮಾರ್ಚ್​ 1ರಂದು ಕರಾಚಿಯ ಅಖ್ತರ್ ಕಾಲೋನಿಯಲ್ಲಿ ಅಪರಿಚಿತ ಬಂದೂಕುದಾರಿಗಳು ಈತನ ತಲೆಗೆ ಎರಡು ಬಾರಿ ಗುಂಡು ಹಾರಿಸಿದ್ದಾರೆ.

ಕಂದಹಾರ್​ ಹೈಜಾಕ್​ ಪ್ರಕರಣ ದೇಶ ಕಂಡ ಅತ್ಯಂತ ನಾಟಕೀಯ ಒತ್ತೆಯಾಳು ಬಿಕ್ಕಟ್ಟುಗಳಲ್ಲಿ ಒಂದಾಗಿದೆ. 1999ರ ಡಿಸೆಂಬರ್​ 24ರಂದು ವಿಮಾನವನ್ನು ಹೈಜಾಕ್​ ಮಾಡಲಾಗಿತ್ತು. ಈ ವಿಮಾನದಲ್ಲಿ 179 ಮಂದಿ ಪ್ರಯಾಣಿಕರು ಹಾಗೂ 11 ಮಂದಿ ಸಿಬ್ಬಂದಿಯಿದ್ದರು.

ಆಗ ತಾಲಿಬಾನ್​ ಆಡಳಿತವನ್ನು ಹೊಂದಿದ್ದ ಅಫ್ಘಾನಿಸ್ತಾನದ ಕಂದಹಾರ್​ನಲ್ಲಿ ವಿಮಾನವನ್ನು ಇಳಿಸಿಕೊಂಡಿದ್ದ ಉಗ್ರರು ಈ ಪ್ರಯಾಣಿಕರನ್ನು ಅಪಹರಿಸುವ ಮೂಲಕ ದೇಶದ ಜೈಲಿನಿಂದ ಮೂವರು ಕುಖ್ಯಾತ ಉಗ್ರರನ್ನು ರಿಲೀಸ್​ ಮಾಡಿಸಿಕೊಂಡಿದ್ದರು. ಈ ಮೂವರ ಪೈಕಿ ಇಬ್ಬರು ಉಗ್ರರು ಇನ್ನೂ ಪಾಕ್​ನಲ್ಲಿ ರಾಜಾರೋಷವಾಗಿ ಇದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...