alex Certify ಮನ ಕಲಕುತ್ತೆ ಈ ಸ್ಟೋರಿ: ಯುದ್ಧದಲ್ಲಿ ಮನೆಯವರನ್ನು ಕಳೆದುಕೊಂಡ ಪುಟ್ಟ ಬಾಲಕಿ; ಆಹಾರ, ನೀರು ಸಿಗದೆ ನರಳಿ ನರಳಿ ಪ್ರಾಣ ಬಿಟ್ಟ ಕಂದಮ್ಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನ ಕಲಕುತ್ತೆ ಈ ಸ್ಟೋರಿ: ಯುದ್ಧದಲ್ಲಿ ಮನೆಯವರನ್ನು ಕಳೆದುಕೊಂಡ ಪುಟ್ಟ ಬಾಲಕಿ; ಆಹಾರ, ನೀರು ಸಿಗದೆ ನರಳಿ ನರಳಿ ಪ್ರಾಣ ಬಿಟ್ಟ ಕಂದಮ್ಮ

ಉಕ್ರೇನ್ ಹಾಗೂ ರಷ್ಯಾ ಉಭಯ ದೇಶಗಳ ನಡುವಿನ ಯುದ್ಧದ ಭೀಕರತೆ, ಪುಟ್ಟ ಮಕ್ಕಳನ್ನು, ಅಮಾಯಕರನ್ನು ಬಲಿಪಡೆಯುತ್ತಿದೆ. ಇದೊಂದು ದೃಶ್ಯ ಬಹುಶಃ ಯುದ್ಧದ ಘೋರ ಪರಿಣಾಮವೇನು ಎಂಬುದನ್ನು ಎಂತವರಿಗಾದರೂ ಅರಿವು ಮೂಡಿಸುವಂತೆ ಮಾಡುತ್ತೆ.

ರಷ್ಯಾ ಭೀಕರ ದಾಳಿಯಿಂದ ಮನೆ, ತಂದೆ-ತಾಯಿಯನ್ನು ಕಳೆದುಕೊಂಡ ಪುಟ್ಟ ಬಾಲಕಿ ಕುಡಿಯಲು ನೀರು ಸಿಗದೇ ಪ್ರಾಣ ಬಿಟ್ಟ ಘಟನೆ ನಡೆದಿದೆ.

ಉಕ್ರೇನ್ ನ ಮರಿಯಪೋಲ್ ನಗರವನ್ನು ರಷ್ಯಾ ಸೇನೆ ಆಕ್ರಮಿಸಿಕೊಂಡಿದ್ದು, ಕ್ಷಣ ಕ್ಷಣಕ್ಕೂ ಕ್ಷಿಪಣಿ, ಬಾಂಬ್ ದಾಳಿಗಳನ್ನು ನಡೆಸುತ್ತಿದೆ. ರಷ್ಯಾ ದಾಳಿಯಲ್ಲಿ 6 ವರ್ಷದ ಬಾಲಕಿ ತಾನಿಯಾ ತನ್ನ ತಾಯಿಯನ್ನು ಕಳೆದುಕೊಂಡಿದ್ದಳು. ಕಳೆದ 6-7 ದಿನಗಳಿಂದ ಆಹಾರ, ನೀರು ಸಿಗದೇ ಕಂಗೆಟ್ಟ ಬಾಲಕಿ ಇದೀಗ ಡಿಹೈಡ್ರೇಷನ್ ನಿಂದಾಗಿ ಪ್ರಾಣಬಿಟ್ಟಿದ್ದಾಳೆ.

BIG NEWS: ಕ್ರಿಕೆಟ್ ಇತಿಹಾಸದಲ್ಲಿ ಹೊಸ ಸಾಧನೆ ಬರೆಯಲು ಮುಂದಾದ ಜೂಲನ್​ ಗೋಸ್ವಾಮಿ

ಮರಿಯಪೋಲ್ ನ ಕಟ್ಟಡವೊಂದರ ಮೇಲೆ ರಷ್ಯಾ ನಡೆಸಿದ್ದ ದಾಳಿಯಲ್ಲಿ ತಾನಿಯಾ, ಅಮ್ಮನನ್ನು ಕಳೆದುಕೊಂಡಿದ್ದಾಳೆ. ಅಮ್ಮನನ್ನು ಕಳೆದುಕೊಂಡು ಅನಾಥವಾಗಿದ್ದ ಮಗು ಹಸಿವಿನಿಂದ ಕಂಗೆಟ್ಟಿದ್ದಾಳೆ. ಕುಡಿಯುವ ನೀರಿಗಾಗಿ ತಡಕಾಡಿದ್ದಾಳೆ. ಒಂದು ಹನಿ ನೀರು ಸಿಗದೇ ಡಿಹೈಡ್ರೇಷನ್ ನಿಂದ ಬಾಲಕಿ ಕೊನೆಯುಸಿರೆಳೆದಿದ್ದಾಳೆ ಎಂದು ಉಕ್ರೇನ್ ಸರ್ಕಾರ ತಿಳಿಸಿದೆ.

ಮರಿಯಪೋಲ್ ನಲ್ಲಿ ಕಳೆದ 8 ದಿನಗಳಿಂದ ಇಂತಹ ಹಲವು ಘಟನೆಗಳು ನಡೆದಿವೆ. ಇಲ್ಲಿನ ಜನರು ಪರದಾಡುತ್ತಿದಾರೆ ಎಂದು ಅಲ್ಲಿನ ಮೇಯರ್ ವಾಡಿಮ್ ಬೊಯಿಚೆಂಕೊ ತಿಳಿಸಿದ್ದಾರೆ. ಆದರೆ ಇದು ಕೇವಲ ಮರಿಯಪೋಲ್ ನಗರದ ಸ್ಥಿತಿ ಮಾತ್ರವಲ್ಲ ಯುದ್ಧಪೀಡಿತ ಉಕ್ರೇನ್ ನ ಬಹುತೇಕ ನಗರಗಳ ಸ್ಥಿತಿ ಕಲ್ಪನೆಗೂ ನಿಲುಕದಷ್ಟು ಭೀಕರವಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...