
ವಿಶ್ವ ಕಪ್ ಕ್ರಿಕೆಟ್ ನಲ್ಲಿ ಪ್ರಸ್ತುತ 38 ವಿಕೆಟ್ಗಳನ್ನು ಕಬಳಿಸಿರುವ ಗೋಸ್ವಾಮಿಗೆ ವಿಶ್ವಕಪ್ನಲ್ಲೇ ಅತಿ ಹೆಚ್ಚು ವಿಕೆಟ್ ಕಬಳಿಸಿದ ಆಟಗಾರ್ತಿ ಎನಿಸಿಕೊಳ್ಳಲು ಒಂದು ವಿಕೆಟ್ ಅಗತ್ಯವಿದೆ. ಇನ್ನೊಂದು ವಿಕೆಟ್ ಪಡೆದರೆ 39 ವಿಕೆಟ್ ಪಡೆದ ದಾಖಲೆ ಹೊಂದಿರುವ ಆಸ್ಟ್ರೇಲಿಯಾದ Lyn Fullston ಅವರ ಸಾಧನೆಯನ್ನು ಜೂಲನ್ ಗೋಸ್ವಾಮಿ ಸರಿಗಟ್ಟಲಿದ್ದಾರೆ.
39 ವರ್ಷದ ಜೂಲನ್ ಗೋಸ್ವಾಮಿ ತಮ್ಮ 2 ದಶಕಗಳ ಕ್ರಿಕೆಟ್ ಜೀವನದಲ್ಲಿ 247 ವಿಕೆಟ್ಗಳನ್ನು ಸಂಪಾದಿಸಿದ್ದಾರೆ. ಏಕದಿನ ಪಂದ್ಯಗಳಲ್ಲಿ 196 ವಿಕೆಟ್ಗಳನ್ನು ಸಂಪಾದಿಸಿರುವ ಗೋಸ್ವಾಮಿ 250 ವಿಕೆಟ್ ಮಾರ್ಕ್ನ್ನು ಪೂರ್ಣಗೊಳಿಸಲು ಮೂರು ವಿಕೆಟ್ಗಳ ಅಗತ್ಯವಿದೆ.
ಮಾರ್ಚ್ 6ರಂದು ನಡೆದಿದ್ದ ಆರಂಭಿಕ ಪಂದ್ಯಾವಳಿಯಲ್ಲಿ ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸುವಲ್ಲಿ ಗೋಸ್ವಾಮಿ ಪ್ರಮುಖ ಪಾತ್ರ ವಹಿಸಿದ್ದರು.
ಪ್ರಾಮಾಣಿಕವಾಗಿ ಹೇಳಬೇಕು ಅಂದರೆ ನನಗೆ ಈ ದಾಖಲೆಯ ಬಗ್ಗೆ ಮಾಹಿತಿಯೇ ಇರಲಿಲ್ಲ. ತಂಡಕ್ಕೆ ಉತ್ತಮ ಆರಂಭವನ್ನು ಒದಗಿಸಬೇಕು ಎಂಬುದು ಮಾತ್ರ ನನ್ನ ತಲೆಯಲ್ಲಿದೆ. ತಂಡದ ಯಶಸ್ಸಿಗೆ ಕೊಡುಗೆ ನೀಡುವುದು ನನ್ನ ಮೊದಲ ಆದ್ಯತೆಯಾಗಿದೆ ಎಂದು ಜೂಲನ್ ಗೋಸ್ವಾಮಿ ಹೇಳಿದ್ದಾರೆ.