ಗ್ಯಾರಂಟಿ ಆದಾಯದ ಜೊತೆಗೆ ತೆರಿಗೆ ಉಳಿಸುವ ತಂತ್ರವನ್ನು ಹುಡುಕುತ್ತಿರುವ ಹೂಡಿಕೆದಾರರಿಗೆ ಮಾರುಕಟ್ಟೆಯಲ್ಲಿ ಕೆಲವೇ ಕೆಲವು ಆಯ್ಕೆಗಳಿವೆ. ಅವುಗಳಲ್ಲಿ ಒಂದು ಸ್ಥಿರ ಠೇವಣಿ ಅಥವಾ ಫಿಕ್ಸೆಡ್ ಡೆಪಾಸಿಟ್ (ಎಫ್ಡಿ). ಆದಾಯ ತೆರಿಗೆ ಕಾಯಿದೆಯ 80ಸಿ ನಿಯಮದ ಅಡಿಯಲ್ಲಿ ತೆರಿಗೆ ಉಳಿಸಲು ಎಫ್ ಡಿ ಸಹಕಾರಿಯಾಗಿದೆ.
ಇದರಲ್ಲಿ ಕನಿಷ್ಠ ಲಾಕ್ ಇನ್ ಅವಧಿ 5 ವರ್ಷಗಳಿದ್ದು, ಗರಿಷ್ಠ 1.5 ಲಕ್ಷ ರೂಪಾಯಿ ತೆರಿಗೆ ಉಳಿತಾಯ ಮಾಡಬಹುದು. ಇದರಲ್ಲಿ ಹೆಚ್ಚು ರಿಸ್ಕ್ ಇಲ್ಲ ಮತ್ತು ರಿಟರ್ನ್ಸ್ ಖಾತ್ರಿ ಕೂಡ ಇರುತ್ತದೆ. ಬೇರೆ ಬೇರೆ ಬ್ಯಾಂಕ್ ಗಳಲ್ಲಿ ಫಿಕ್ಸೆಡ್ ಡೆಪಾಸಿಟ್ ಮೇಲಿನ ಬಡ್ಡಿ ದರ ಬೇರೆ ಬೇರೆ ರೀತಿಯಾಗಿದೆ.
ಇಂಡಸಿಂಡ್ ಬ್ಯಾಂಕ್ ನಲ್ಲಿ ಎಫ್ ಡಿ ಮೇಲೆ ಶೇ.6.5ರಷ್ಟು ಬಡ್ಡಿ ದೊರೆಯುತ್ತದೆ. ಆರ್ ಬಿ ಎಲ್ ಬ್ಯಾಂಕ್ ನಲ್ಲಿ ಶೇ.6.3, ಐಡಿಎಫ್ ಸಿ ಫಸ್ಟ್ ಬ್ಯಾಂಕ್ ನಲ್ಲಿ ಶೇ.6.25, ಡಿಸಿಬಿ ಬ್ಯಾಂಕ್ ನಲ್ಲಿ ಶೇ.5.95, ಕರೂರ್ ವೈಶ್ಯ ಬ್ಯಾಂಕ್ ನಲ್ಲಿ ಶೇ.5.9 ರಷ್ಟು ಬಡ್ಡಿ ದೊರೆಯುತ್ತಿದೆ.
ವ್ಯಕ್ತಿಗಳು ಮತ್ತು ಹಿಂದೂ ಅವಿಭಜಿತ ಕುಟುಂಬಗಳು ಈ ಬ್ಯಾಂಕ್ ಗಳಲ್ಲಿ ಉಳಿತಾಯ ಖಾತೆ ತೆರೆಯುವ ಮೂಲಕ ಸ್ಥಿರ ಠೇವಣಿ ಇಟ್ಟು, ತೆರಿಗೆ ಉಳಿತಾಯ ಮಾಡಬಹುದಾಗಿದೆ.