ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಸುಂದರವಾದ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಹೊಸ ವಾಣಿಜ್ಯ ಜಾಹೀರಾತು ಮೂಲಕ ದುಬೈ ಪ್ರವಾಸೋದ್ಯಮವನ್ನು ಉತ್ತೇಜಿಸುವ ಪ್ರಾಯೋಜಿತದಲ್ಲಿ ಕಾಣಿಸಿಕೊಂಡಿದ್ದಾರೆ.
ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್ನಲ್ಲಿ ವೀಡಿಯೊವನ್ನು ಹಂಚಿಕೊಂಡ ಅವರು, ಪ್ರತಿಯೊಂದು ಅನುಭವವೂ ದುಬೈನಲ್ಲಿ ವಿಶೇಷ ಸ್ಮರಣೆಯಾಗುತ್ತದೆ ಎಂಬ ಶೀರ್ಷಿಕೆಯನ್ನು ಬರೆದಿದ್ದಾರೆ.
ಶಾರುಖ್, ದಿ ಅಟ್ಲಾಂಟಿಸ್ ಪಾಮ್ ಹೋಟೆಲ್ನ ಮುಂಭಾಗದಲ್ಲಿ ಚಿತ್ರೀಕರಣದಲ್ಲಿರುವುದರೊಂದಿಗೆ ಜಾಹೀರಾತು ಪ್ರಾರಂಭವಾಗುತ್ತದೆ. ಈ ವೇಳೆ ತಮ್ಮ ಮಗಳು ಸುಹಾನಾ ಅವರಿಂದ ಕರೆಯನ್ನು ಸ್ವೀಕರಿಸುತ್ತಾರೆ. ಮನೆಗೆ ತಲುಪಿದ್ದೀರಾ ಅಥವಾ ಇನ್ನೂ ಚಿತ್ರೀಕರಣದಲ್ಲಿದ್ದೀರಾ ಎಂದು ಫೋನ್ ನಲ್ಲಿ ಸುಹಾನಾ ತಂದೆ ಬಳಿ ಕೇಳುತ್ತಾರೆ. ತಾನು ಇನ್ನೂ ಚಿತ್ರೀಕರಣದಲ್ಲಿರುವುದಾಗಿ ಶಾರುಖ್ ಹೇಳುತ್ತಾರೆ. ಅದಕ್ಕೆ ಸುಹಾನಾ ದುಬೈ ಅನ್ನು ಸುತ್ತಲೂ ನೋಡಿ ಆನಂದಿಸಲು ಸಲಹೆ ನೀಡುತ್ತಾರೆ.
ಮಗಳ ಜೊತೆ ಮಾತನಾಡಿದ ನಂತರ, ಶಾರುಖ್ ದುಬೈನಲ್ಲಿ ಆನಂದಿಸಲು ನಿರ್ಧರಿಸಿದ್ದಾರೆ. ಮುಕ್ತವಾಗಿ ಹೊರಗೆ ಹೋಗುವ ಕಿಂಗ್ ಖಾನ್ ಬೀಚ್ನಲ್ಲಿ ವಾಲಿಬಾಲ್ ಆಡುತ್ತಾರೆ. ಅಭಿಮಾನಿಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸುತ್ತಾರೆ, ಮಾಲ್ಗೆ ಭೇಟಿ ನೀಡುತ್ತಾರೆ. ನಂತರ ಅಭಿಮಾನಿಗಳೊಂದಿಗೆ ನೃತ್ಯ ಮಾಡುತ್ತಾ ಎಂಜಾಯ್ ಮಾಡಿದ್ದಾರೆ.
ದಿನದ ಕೊನೆಯಲ್ಲಿ, ಸುಹಾನಾ ತನ್ನ ತಂದೆಗೆ ಮತ್ತೆ ಕರೆ ಮಾಡಿ ಅಂದಿನ ದಿನ ಹೇಗಾಯಿತು ಎಂದು ಕೇಳಿದ್ದಾರೆ. ಇಂದು ತನ್ನ ಜೀವನದ ಅತ್ಯುತ್ತಮ ದಿನವಾಗಿತ್ತು ಎಂದು ಹೇಳುತ್ತಾ, ಸುಹಾನಳಿಗೆ ಧನ್ಯವಾದ ತಿಳಿಸುತ್ತಾರೆ.
ದುಬೈ ಪ್ರವಾಸೋದ್ಯಮವನ್ನು ಉತ್ತೇಜಿಸುವ ಜಾಹೀರಾತಿನಲ್ಲಿ ಶಾರುಖ್ ಈ ರೀತಿ ಕಾಣಿಸಿಕೊಂಡಿದ್ದಾರೆ. ಜಾಹೀರಾತು ಕೂಡ ಬಹಳ ಸೊಗಸಾಗಿ ಮೂಡಿಬಂದಿದೆ.