alex Certify BIG BREAKING: 2 ವರ್ಷದ ನಂತ್ರ ಮಾ. 27 ರಿಂದ ಅಂತರರಾಷ್ಟ್ರೀಯ ಪ್ರಯಾಣಿಕ ವಿಮಾನ ಸೇವೆ ಪುನರಾರಂಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: 2 ವರ್ಷದ ನಂತ್ರ ಮಾ. 27 ರಿಂದ ಅಂತರರಾಷ್ಟ್ರೀಯ ಪ್ರಯಾಣಿಕ ವಿಮಾನ ಸೇವೆ ಪುನರಾರಂಭ

ನವದೆಹಲಿ: ಎರಡು ವರ್ಷಗಳ ನಂತರ ಭಾರತ ಮಾರ್ಚ್ 27 ರಿಂದ ನಿಯಮಿತ ಅಂತರಾಷ್ಟ್ರೀಯ ವಿಮಾನ ಕಾರ್ಯಾಚರಣೆಯನ್ನು ಪುನರಾರಂಭಿಸಲಿದೆ.

ಜಗತ್ತಿನಾದ್ಯಂತ ವ್ಯಾಕ್ಸಿನೇಷನ್ ಪಡೆದ ಪ್ರಮಾಣ ಹೆಚ್ಚಳ ಗುರುತಿಸಿದ ನಂತರ ಮತ್ತು ಮಧ್ಯಸ್ಥಗಾರರೊಂದಿಗೆ ಸಮಾಲೋಚಿಸಿದ ನಂತರ, ಭಾರತ ಸರ್ಕಾರ ಮಾರ್ಚ್ 27, 2022 ರಿಂದ ವಿಮಾನ ಸೇವೆ ಆರಂಭಿಸಲಿದೆ. ಭಾರತಕ್ಕೆ ಆಗಮಿಸುವ/ಭಾರತದಿಂದ ಹೊರಗೆ ವಾಣಿಜ್ಯ ಅಂತರರಾಷ್ಟ್ರೀಯ ಪ್ರಯಾಣಿಕ ಸೇವೆಗಳನ್ನು ಪುನರಾರಂಭಿಸಲು ನಿರ್ಧರಿಸಿದೆ ಎಂದು ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.

ಅಂತರಾಷ್ಟ್ರೀಯ ಕಾರ್ಯಾಚರಣೆಗಳು ಅಂತರಾಷ್ಟ್ರೀಯ ಪ್ರಯಾಣಕ್ಕಾಗಿ ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳಿಗೆ ಕಟ್ಟುನಿಟ್ಟಾದ ಅನುಸರಣೆಗೆ ಒಳಪಟ್ಟಿರುತ್ತದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.

ಫೆಬ್ರವರಿ 28 ರಂದು, ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಷನ್​​(DGCA) ನಿಯಮಿತ ವಾಣಿಜ್ಯ ಅಂತರರಾಷ್ಟ್ರೀಯ ಪ್ರಯಾಣಿಕ ವಿಮಾನಗಳ ಮೇಲಿನ ನಿಷೇಧವನ್ನು ಮುಂದಿನ ಆದೇಶದವರೆಗೆ ವಿಸ್ತರಿಸಿತ್ತು.

ಭಾರತವು 2021 ರಿಂದ ಏರ್ ಬಬಲ್ ವ್ಯವಸ್ಥೆಗಳ ಅಡಿಯಲ್ಲಿ ವಿಮಾನಗಳನ್ನು ನಿರ್ವಹಿಸುತ್ತಿದೆ. ಭಾರತವು ಈ ದೇಶಗಳ ಜೊತೆಗೆ ವಾಯು ಸಾರಿಗೆ(air transport bubbles) ಹೊಂದಿದೆ. ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಹ್ರೇನ್, ಬಾಂಗ್ಲಾದೇಶ, ಭೂತಾನ್, ಕೆನಡಾ, ಇಥಿಯೋಪಿಯಾ, ಫಿನ್ಲ್ಯಾಂಡ್, ಫ್ರಾನ್ಸ್, ಜರ್ಮನಿ, ಇರಾಕ್, ಜಪಾನ್, ಕಝಾಕಿಸ್ತಾನ್, ಕೀನ್ಯಾ, ಕುವೈತ್, ಮಾಲ್ಡೀವ್ಸ್, ಮಾರಿಷಸ್, ನೇಪಾಳ, ನೆದರ್ಲ್ಯಾಂಡ್ಸ್, ನೈಜೀರಿಯಾ, ಓಮನ್, ಕತಾರ್, ರಷ್ಯಾ, ರುವಾಂಡಾ, ಸೌದಿ ಅರೇಬಿಯಾ, ಸೀಶೆಲ್ಸ್, ಸಿಂಗಾಪುರ್, ಶ್ರೀಲಂಕಾ, ಸ್ವಿಟ್ಜರ್ಲೆಂಡ್, ತಾಂಜಾನಿಯಾ, ಉಕ್ರೇನ್, ಯುನೈಟೆಡ್ ಅರಬ್ ಎಮಿರೇಟ್ಸ್, ಯುನೈಟೆಡ್ ಕಿಂಗ್‌ಡಮ್, ಯುಎಸ್ ಮತ್ತು ಉಜ್ಬೇಕಿಸ್ತಾನ್ ಗೆ ವಿಮಾನಗಳು ಸಂಚರಿಸಲಿವೆ.

ಕಳೆದ ವರ್ಷ ನವೆಂಬರ್‌ನಲ್ಲಿ ವಾಯುಯಾನ ಸಚಿವಾಲಯವು ಡಿಸೆಂಬರ್ 15, 2021 ರಿಂದ ನಿಯಮಿತ ಅಂತರಾಷ್ಟ್ರೀಯ ವಿಮಾನಯಾನವನ್ನು ಪುನರಾರಂಭಿಸುವ ಯೋಜನೆಯನ್ನು ಪ್ರಕಟಿಸಿತ್ತು, ಆದರೆ ಓಮಿಕ್ರಾನ್ ಪ್ರಕರಣಗಳ ಹೆಚ್ಚಳದಿಂದಾಗಿ ಆ ಆದೇಶವನ್ನು ರದ್ದುಗೊಳಿಸಿತು.

ಕೊರೋನಾ ವೈರಸ್ ಸಾಂಕ್ರಾಮಿಕದ ಮೊದಲ ಅಲೆ ನಿಭಾಯಿಸಲು ರಾಷ್ಟ್ರವ್ಯಾಪಿ ಲಾಕ್‌ ಡೌನ್ ವಿಧಿಸಿದ ನಂತರ ಮಾರ್ಚ್ 2020 ರಲ್ಲಿ ಅಂತರರಾಷ್ಟ್ರೀಯ ವಿಮಾನಯಾನಗಳನ್ನು ಮೊದಲು ಸ್ಥಗಿತಗೊಳಿಸಲಾಗಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...