ಬೆಂಗಳೂರು: ಗೃಹರಕ್ಷಕ ಸ್ವಯಂಸೇವಕರ ಕರ್ತವ್ಯ ಭತ್ಯೆಯನ್ನು ಸರ್ಕಾರ ಹೆಚ್ಚಳ ಮಾಡಿದೆ. 3025 ಗೃಹರಕ್ಷಕ ಸ್ವಯಂಸೇವಕರ ಭತ್ಯೆಯನ್ನು ರಾಜ್ಯ ಸರ್ಕಾರ ಹೆಚ್ಚಳ ಮಾಡಿ ಆದೇಶಿಸಿದೆ.
ದಿನ ಭತ್ಯೆಯನ್ನು 600 ರೂಪಾಯಿಗೆ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ. ಬೆಂಗಳೂರು ನಗರದಲ್ಲಿ 455 ರಿಂದ 600 ರೂಪಾಯಿ ಹೆಚ್ಚಳ ಮಾಡಲಾಗಿದೆ. ಉಳಿದ ನಗರಗಳಲ್ಲಿ 380 ರೂ.ನಿಂದ 600 ರೂ.ಗೆ ಹೆಚ್ಚಳ ಮಾಡಲಾಗಿದೆ ಎನ್ನಲಾಗಿದೆ.