ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಜಾರ್ಖಂಡ್ನ ಕಾಂಗ್ರೆಸ್ ಶಾಸಕರೊಬ್ಬರು ಇಂದು ಬೆಳಗ್ಗೆ ವಿಧಾನಸಭೆಗೆ ಕುದುರೆ ಸವಾರಿ ಮೂಲಕ ಆಗಮಿಸಿದ್ದಾರೆ.
ಜಾರ್ಖಂಡ್ನ ಹಜಾರಿಬಾಗ್ ಜಿಲ್ಲೆಯ ಬರ್ಕಗಾಂವ್ ವಿಧಾನಸಭಾ ಕ್ಷೇತ್ರದ ಶಾಸಕ ಅಂಬಾ ಪ್ರಸಾದ್ ಕುದುರೆ ಮೇಲೆ ಕುಳಿತು ವಿಧಾನಸಭೆಗೆ ಆಗಮಿಸುವ ಮೂಲಕ ಎಲ್ಲರ ಗಮನ ಸೆಳೆದರು.
ಇನ್ನು ಇದೇ ವೇಳೆ ಮಾತನಾಡಿದ ಶಾಸಕ ಅಂಬಾ ಪ್ರಸಾದ್, ಪ್ರತಿಯೊಬ್ಬ ಮಹಿಳೆಯಲ್ಲಿಯೂ ದುರ್ಗಾ, ಝಾನ್ಸಿಯ ರಾಣಿ ಇದ್ದಾಳೆ. ಪ್ರತಿ ಸವಾಲುಗಳನ್ನು ಶಕ್ತಿಯಿಂದ ಎದುರಿಸಬೇಕು. ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುತ್ತಿರುವುದರಿಂದ ಪೋಷಕರು ಕೂಡ ತಮ್ಮ ಮನೆಯ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವಂತಾಗಬೇಕು ಎಂದು ಹೇಳಿದರು.