alex Certify ಮಾಜಿ ಪ್ರಾಪರ್ಟಿ ಡೀಲರ್ ಈಗ ಶುಚಿರುಚಿ ಊಟ ನೀಡುವ ಸಂಚಾರಿ ಹೋಟೆಲ್‌ ಮಾಲಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಜಿ ಪ್ರಾಪರ್ಟಿ ಡೀಲರ್ ಈಗ ಶುಚಿರುಚಿ ಊಟ ನೀಡುವ ಸಂಚಾರಿ ಹೋಟೆಲ್‌ ಮಾಲಕಿ

ಕೋವಿಡ್​ ಸಾಂಕ್ರಾಮಿಕದ ಬಳಿಕ ಇದೀಗ ಜಗತ್ತು ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಕೋವಿಡ್​ ಸಂದರ್ಭದಲ್ಲಿ ಬಂದ್​ ಆಗಿದ್ದ ಸಾಕಷ್ಟು ಅಂಗಡಿಗಳು ಇದೀಗ ಒಂದೊಂದಾಗಿಯೇ ತಲೆ ಎತ್ತುತ್ತಿವೆ. ಅದೇ ರೀತಿ ದೆಹಲಿಯಲ್ಲಿ ನಿಮಗೆ ಬಿಳಿಯ ಕಾರಿನೊಳಗೆ ಒಂದು ಉಪಹಾರ ಗೃಹ ಕಾಣಲಿದೆ.

ಸೆಕ್ಟರ್​ 7ರ ನಿವಾಸಿ ಮಾಜಿ ಪ್ರಾಪರ್ಟಿ ಡೀಲರ್​ ಡಾಲಿ ಶರ್ಮಾ ಜೀವನದಲ್ಲಿ ಸ್ವತಂತ್ರರಾಗಲು ಬಯಸುತ್ತಿರುವ ಕಾರಣ ಈ ರೀತಿಯ ಉದ್ಯಮಕ್ಕೆ ಕೈ ಹಾಕಿದ್ದಾರೆ.

ತಮ್ಮ 30ನೇ ವರ್ಷದಲ್ಲಿ ಸ್ನೇಹಿತರೊಬ್ಬರಿಂದ ಪ್ರೇರಣೆ ಪಡೆದ ಡಾಲಿ ಮೂರು ವರ್ಷಗಳ ಹಿಂದೆ ಈ ಉಪಹಾರ ಗೃಹವನ್ನು ಆರಂಭಿಸಿದರು. ತಮ್ಮ ಉಪಹಾರ ಗೃಹದಲ್ಲಿ ಮನೆಯಲ್ಲಿ ತಯಾರಿಸಿದಂತಹ ರುಚಿ ಹಾಗೂ ಗುಣಮಟ್ಟವನ್ನು ಹೊಂದಿದ ಆಹಾರವನ್ನೇ ನೀಡಲು ಆರಂಭಿಸಿದ್ದರು. ಆದರೆ ಕೋವಿಡ್​ನಿಂದಾಗಿ ಎಲ್ಲರ ಜೀವನವೇ ತಲೆಕೆಳಗಾಯ್ತು. ಲಾಕ್​ಡೌನ್​ ಸಮಯದಲ್ಲಿ ಡಾಲಿ ಶರ್ಮಾರ ಉದ್ಯಮಕ್ಕೆ ಅಡೆ ತಡೆಗಳು ಉಂಟಾದವು.

ಆದರೆ ಇದೀಗ ಜಗತ್ತು ಮತ್ತೆ ಸಹಜ ಸ್ಥಿತಿಯತ್ತ ಮರಳುತ್ತಿದೆ. ಹೀಗಾಗಿ ಡಾಲಿ ಕೂಡ ತಮ್ಮ ಉದ್ಯಮವನ್ನು ಮತ್ತೊಮ್ಮೆ ಪುನಾರಂಭಿಸಿದ್ದಾರೆ. ಬೆಳಗ್ಗೆ 11 ರಿಂದ ಮಧ್ಯಾಹ್ನ ಮೂರು ಗಂಟೆಯವರೆಗೆ ಈ ವಾಹನದಲ್ಲಿ ಆಹಾರ ಲಭ್ಯವಿರುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...