ಯುದ್ಧಪೀಡಿತ ಉಕ್ರೇನ್ ನಿಂದ ಹೊರ ಹೋಗುತ್ತಿರುವ ಮಹಿಳೆಯರ ಮೈಮಾಟದ ಬಗ್ಗೆ ಬ್ರೆಜಿಲ್ ರಾಜಕಾರಣಿಯ ಲೈಂಗಿಕ ಟೀಕೆಗಳು ವಿವಾದ ಹುಟ್ಟುಹಾಕಿದೆ.
ಉಕ್ರೇನ್ ಪ್ರವಾಸದ ಸಮಯದಲ್ಲಿ ಉಕ್ರೇನಿಯನ್ ಯುದ್ಧ ನಿರಾಶ್ರಿತ ಮಹಿಳೆಯರ ಬಗ್ಗೆ ಅಶ್ಲೀಲವಾಗಿ ಮಾತನಾಡಿದ ಸಾವೊ ಪಾಲೊ ಕಾಂಗ್ರೆಸ್ ನ ಆರ್ಥರ್ ಡೊ ವಾಲ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಆರ್ಥರ್ ಡೊ ವಾಲ್(35), ಅವರು ಕಳೆದ ವಾರ ಯುದ್ಧದ ವಿನಾಶವನ್ನು ನೇರವಾಗಿ ವೀಕ್ಷಿಸಲು ಮತ್ತು ಉಕ್ರೇನಿಯನ್ನರ ದುಃಸ್ಥಿತಿಯ ಬಗ್ಗೆ ಅರಿವು ಮೂಡಿಸಲು ರಾಜತಾಂತ್ರಿಕ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಉಕ್ರೇನ್ ಮಹಿಳೆಯರ ಸೌಂದರ್ಯದ ಬಗ್ಗೆ ಕೆಟ್ಟ ಕಾಮೆಂಟ್ಗಳನ್ನು ಮಾಡಿದ್ದಾರೆ.
ಬ್ರೆಜಿಲಿಯನ್ ಮಾಧ್ಯಮಗಳು ಅವರು ಪ್ರವಾಸದ ಬಗ್ಗೆ ಮಾತನಾಡುವ ರಹಸ್ಯ ಧ್ವನಿಮುದ್ರಣಗಳನ್ನು ಸೋರಿಕೆ ಮಾಡಿದ ನಂತರ, ಡೊ ವಾಲ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಗವರ್ನರ್ ಆಗಿರುವ ಅವರ ಪ್ರಚಾರವನ್ನು ಅಮಾನತುಗೊಳಿಸಲಾಗಿದೆ.
ನಾನು ಉಕ್ರೇನ್ ಮತ್ತು ಸ್ಲೋವಾಕಿಯಾ ನಡುವಿನ ಗಡಿಯನ್ನು ಈಗಷ್ಟೇ ಕಾಲ್ನಡಿಗೆಯಲ್ಲಿ ದಾಟಿದ್ದೇನೆ. ಬ್ರೋ, ನಾನು ನಿಮಗೆ ಪ್ರಮಾಣ ಮಾಡುತ್ತೇನೆ. ಸುಂದರ ಹುಡುಗಿಯರ ವಿಷಯದಲ್ಲಿ ನಾನು ಅಂತಹವರನ್ನು ನೋಡಿಲ್ಲ. ನಿರಾಶ್ರಿತರ ಸರತಿ ಸಾಲು, ಉಕ್ರೇನ್ ಮಹಿಳೆಯರು ದೇವತೆಗಳಂತಿದ್ದಾರೆ. ಅವರು ಬಡವರಾಗಿದ್ದಾರೆ. ಬ್ರೆಜಿಲ್‌ನ ಅತ್ಯುತ್ತಮ ನೈಟ್‌ಕ್ಲಬ್ ನ ಹೊರಗಿನ ಸರತಿಯಲ್ಲಿ ನಿಂತಂತೆ ನಿರಾಶ್ರಿತ ಮಹಿಳೆಯರು ನಿಂತಿದ್ದಾರೆ ಎಂದೆಲ್ಲಾ ಹೇಳಿದ್ದಾರೆ.
ಇಷ್ಟೇ ಅಲ್ಲದೇ ಉಕ್ರೇನ್ ಮಹಿಳೆಯರ ಸೌಂದರ್ಯ, ಅಸಹಾಯಕತೆ ಬಗ್ಗೆ ಅಶ್ಲೀಲವಾಗಿ ಮಾತನಾಡಿದ ಆರ್ಥರ್ ಡೊ ವಾಲ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಬ್ರೆಜಿಲ್ ನಲ್ಲಿ ಉಕ್ರೇನ್ ಮಾಜಿ ರಾಯಭಾರಿಯ ಪತ್ನಿ ಇಂತಹ ಹೇಳಿಕೆ ಖಂಡಿಸಿ, ಸ್ವಲ್ಪ ಗೌರವ ತೋರಿಸು ಎಂದು ಹೇಳಿದ್ದಾರೆಂದು ಗಾರ್ಡಿಯನ್ ತಿಳಿಸಿದೆ.