ಹಿಜಾಬ್ ಸಮರ್ಥಿಸುವ ಧಾರ್ಮಿಕ ಮುಖಂಡರನ್ನು ಖಂಡಿಸಿದ ಟ್ವಿಂಕಲ್ ಖನ್ನಾ 08-03-2022 10:10AM IST / No Comments / Posted In: Featured News, Live News, Entertainment ನಟಿ, ಲೇಖಕಿ ಟ್ವಿಂಕಲ್ ಖನ್ನಾ ಸಾಮಾಜಿಕ ಸಮಸ್ಯೆಗಳು ಮತ್ತು ಅನ್ಯಾಯಗಳ ವಿರುದ್ಧ ಲೇಖನಗಳನ್ನು ಬರೆಯುತ್ತಾರೆ. ಇದೀಗ ಟ್ವಿಂಕಲ್ ಖನ್ನಾ ಪ್ರಸ್ತುತ ನಡೆಯುತ್ತಿರುವ ಹಿಜಾಬ್ ವಿವಾದದ ಬಗ್ಗೆ ಮಾತನಾಡಿದ್ದಾರೆ. ಮಹಿಳೆಯರು ತಾವು ಧರಿಸಲು ಯಾವುದನ್ನು ಇಷ್ಟಪಡುತ್ತಾರೋ ಅಂತಹ ಉಡುಪನ್ನು ಧರಿಸುವ ಸ್ವಾತಂತ್ರ್ಯ ಅವರಿಗಿದೆ ಎಂದು ಹೇಳಿದ್ದಾರೆ. ಬುರ್ಖಾಗಳು ಮತ್ತು ಘುಂಗಾಟ್ಗಳಂತೆಯೇ ಹಿಜಾಬ್ ಧಾರ್ಮಿಕ ಮತ್ತು ಸಾಂಸ್ಕೃತಿಕ ರಚನೆಗಳನ್ನು ಹೊಂದಿವೆ ಎಂದು ಅವರು ಹೇಳಿದ್ದಾರೆ. ತಮ್ಮ ಅಂಕಣದಲ್ಲಿ ಇದೇ ಕುರಿತು ಮಾತನಾಡಿರುವ ಅವರು, ಕೆಲವು ಧಾರ್ಮಿಕ ಮುಖಂಡರು ಹಿಜಾಬ್ ಬಗ್ಗೆ ಮಾತನಾಡುವುದನ್ನು ಕೇಳಿದ್ರೆ ಮತ್ತು ಅದನ್ನು ಸಮರ್ಥಿಸಿಕೊಳ್ಳುವುದು ಕಂಡರೆ ನಗು ಬರುತ್ತದೆ ಎಂದು ಅವರು ಟೀಕಿಸಿದ್ದಾರೆ. ಹಿಜಾಬ್ ಪುರುಷರನ್ನು ಹೇಗೆ ಪ್ರಲೋಭನೆಗೆ ಒಳಪಡಿಸುವುದನ್ನು ತಡೆಯುತ್ತದೆ ಎಂಬುದರ ಕುರಿತು ಕೆಲವು ಧಾರ್ಮಿಕ ಮುಖಂಡರು ಮಾತನಾಡುವುದನ್ನು ಒಪ್ಪಿಕೊಳ್ಳಲೇಬೇಕು. ಈ ಎಲ್ಲಾ ಭಾಯಿ ಸಾಬ್ಗಳು ಕುಳಿತುಕೊಂಡು ಮಾತನಾಡಲು ಅವಕಾಶ ನೀಡಬೇಕು ಎಂದಿದ್ದಾರೆ. ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ಟ್ವಿಂಕಲ್ ಖನ್ನಾ ಜೀವನ ಮತ್ತು ರಮ್ಮಿ ಒಂದೇ ನಿಯಮಗಳನ್ನು ಅನುಸರಿಸಿ, ನಿಮ್ಮ ಕೈಯಲ್ಲಿರುವ ಜೋಕರ್ ನಿಮ್ಮ ತೋಳುಗಳನ್ನು ಮೇಲಕ್ಕೆತ್ತಿದಕ್ಕಿಂತ ಉತ್ತಮವಾಗಿದೆ ಎಂದು ತಿಳಿಸಿದ್ದಾರೆ. Life and rummy follow the same rules, a joker in your hand is better than an ace up your sleeve. Follow stand-ups instead of mystics and ministers,the only price you pay is the admission ticket, or even better, is included in your Netflix subscription.https://t.co/8Fbb1KABzb pic.twitter.com/XMTcAv51fY — Twinkle Khanna (@mrsfunnybones) March 6, 2022