ನವದೆಹಲಿ: 5 ರಾಜ್ಯಗಳ ವಿಧಾನಸಭೆ ಚುನಾವಣೆಯ ಮತದಾನೋತ್ತರ ಸಮೀಕ್ಷೆಯ ಪ್ರಕಾರ ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ.
ಪಂಜಾಬ್ ನಲ್ಲಿ ಒಟ್ಟು 117 ಸ್ಥಾನಗಳಿದ್ದು, ಬಹುಮತಕ್ಕೆ 59 ಸ್ಥಾನಗಳು ಬೇಕಿದೆ. ಪಂಜಾಬ್ ನಲ್ಲಿ ಅಧಿಕಾರಕ್ಕೆ ಬರುವ ಸಂಭಾವ್ಯ ಪಕ್ಷ ಆಮ್ ಆದ್ಮಿ ಪಾರ್ಟಿ ಆಗಿದೆ. ಬಹುತೇಕ ಎಲ್ಲಾ ಸಮೀಕ್ಷೆಗಳು AAP ಅಧಿಕಾರಕ್ಕೇರಲಿದೆ ಎಂದು ತಿಳಿಸಿವೆ
ಇಟಿಜಿ ರಿಸರ್ಚ್ ಸರ್ವೆಯ ಪ್ರಕಾರ ಬಿಜೆಪಿ 3 -7, ಕಾಂಗ್ರೆಸ್ 27 -33, ಎಎಪಿ 70 -75 ಅಕಾಲಿದಳ 7 -13
ಇಂಡಿಯಾ ಟುಡೇ ಸಮೀಕ್ಷೆಯ ಪ್ರಕಾರ ಬಿಜೆಪಿ 1 -4, ಕಾಂಗ್ರೆಸ್ 19 -31, ಎಎಪಿ 76 – 90, ಅಕಾಲಿದಳ 7 -11
ನ್ಯೂಸ್ ಎಕ್ಸ್, ಪೋಲ್ ಸ್ಟರ್ ಸಮೀಕ್ಷೆಯ ಪ್ರಕಾರ ಬಿಜೆಪಿ 1 -6, ಕಾಂಗ್ರೆಸ್ 24 -29, ಎಎಪಿ 56 -61, ಅಕಾಲಿದಳ 22 -26
ರಿಪಬ್ಲಿಕ್ ಟಿವಿ ಸಮೀಕ್ಷೆಯ ಪ್ರಕಾರ ಬಿಜೆಪಿ 1 -3, ಕಾಂಗ್ರೆಸ್ 23 -31, AAP 62 – 70, ಅಕಾಲಿದಳ 16 -24
ಟಿವಿ9 ಭಾರತವರ್ಷ, ಪೋಲ್ಸ್ಟರ್ ಸಮೀಕ್ಷೆಯ ಪ್ರಕಾರ ಬಿಜೆಪಿ 1 -6, ಕಾಂಗ್ರೆಸ್ 24 -29, AAP 56 -61 ಅಕಾಲಿದಳ 22 -26 ಸ್ಥಾನ ಗಳಿಸುವ ಸಾಧ್ಯತೆ ಇದೆ.