ರಾಮನಗರ: ಹೆಲ್ಮೆಟ್ ಹಾಕದ ಬೈಕ್ ಸವಾರರಿಂದ ಭಾರಿ ಪ್ರಮಾಣದಲ್ಲಿ ದಂಡ ವಸೂಲಿ ಮಾಡುತ್ತಿದ್ದ ಸಂಚಾರಿ ಪೊಲೀಸರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಮಾನ ಮರ್ಯಾದೆ ಇಲ್ವಾ ಎಂದು ಗುಡುಗಿದ್ದಾರೆ.
ರಾಮನಗರದಲ್ಲಿ ಪೊಲೀಸರ ಕ್ರಮಕ್ಕೆ ಕಿಡಿಕಾರಿರುವ ಕುಮಾರಸ್ವಾಮಿ, ಜನರ ರಕ್ಷಿಸಲು ಇದ್ದೀರೋ ? ಇಲ್ಲ ಜನರಿಗೆ ತೊಂದರೆ ಕೊಡಲು ಇದ್ದೀರೋ ? ನಿನ್ನೆ ಮಧ್ಯಾಹ್ನ ದುಡ್ದು ಹೊಡೆದುಕೊಂಡು ಹೋಗಿದ್ದಾರೆ, ಅವರನ್ನು ಹಿಡಿಯಲಾಗಲಿಲ್ಲ. ಈಗ ಜನರಿಂದ ವಸೂಲಿ ಮಾಡಿ ತೊಂದರೆ ಕೊಡುತ್ತಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಂಡ ಕಟ್ಟಿಸಿಕೊಳ್ಳಲು 500, 1000 ರೂಪಾಯಿ…… ಯಾರಪ್ಪನ ಮನೆ ದುಡ್ಡು ? ಹೆರಿಗೆಗೆ ಹೋಗುವ ಹೆಣ್ಮಕ್ಕಳನ್ನು ರಸ್ತೆಯಲ್ಲಿ ಅಡ್ಡ ಹಾಕ್ತೀರಾ ? ಮಾನ ಮರ್ಯಾದೆ ಇಲ್ವಾ? ಸರ್ಕಾರ ಸಂಬಳ ಕೊಡಲ್ವ? ಎಂದು ವಾಗ್ದಾಳಿ ನಡೆಸಿದ್ದಾರೆ.