ಮನೆಯಲ್ಲೇ ನಕಲಿ ನೋಟು ಮುದ್ರಿಸುತ್ತಿದ್ದ ಭೂಪ ʼಅಂದರ್ʼ 07-03-2022 4:38PM IST / No Comments / Posted In: Latest News, India, Live News ಮನೆಯಲ್ಲಿ ನಕಲಿ ನೋಟುಗಳನ್ನು ಮುದ್ರಿಸಿ ಮಾರುಕಟ್ಟೆಯಲ್ಲಿ ಚಲಾವಣೆ ಮಾಡುತ್ತಿದ್ದ ವ್ಯಕ್ತಿಯನ್ನು ನೋಯ್ಡಾ ಪೊಲೀಸರು ಬಂಧಿಸಿದ್ದಾರೆ. 4750 ರೂಪಾಯಿ ಮೌಲ್ಯದ ನೋಟುಗಳನ್ನು ವಶಪಡಿಸಿಕೊಂಡಿದ್ದ ಪೊಲೀಸರಿಗೆ ಇದರಲ್ಲಿ ನಕಲಿ ನೋಟುಗಳು ಕಂಡು ಬಂದ ಬಳಿಕ ನಕಲಿ ನೋಟುಗಳ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ನಕಲಿ ನೋಟುಗಳನ್ನು ಮುದ್ರಣ ಮಾಡಲು ಬಳಸುತ್ತಿದ್ದ 2 ರೀಮ್ ಕೇಸುಗಳು ಹಾಗೂ ಹೆಚ್ಪಿ ಪ್ರಿಂಟರ್ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತ ವ್ಯಕ್ತಿಯನ್ನು ಜಾನಕಿ ಯಾದವ್ ಎಂದು ಗುರುತಿಸಲಾಗಿದೆ. ಈತ ಗೋಂಡಾ ಜಿಲ್ಲೆಯ ನಿವಾಸಿಯಾಗಿದ್ದು ಪ್ರಸ್ತುತ ಸೆಕ್ಟರ್ 53ರ ಗಿಝೋರೆ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಎನ್ನಲಾಗಿದೆ. ಬಂಧಿತನಿಂದ ಪೊಲೀಸರು ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. कमिश्नरेट गौतमबुद्धनगर पुलिस का सराहनीय कार्य । जाली नोट तैयार कर बाजार में चलाने वाला अभियुक्त गिरफ्तार, कब्जे से 4750 रूपये के नकली नोट, 590 रूपये असली नोट, 99 पेपर पर नकली 198 अधबने नोट, 02 रिम कागज छापने हेतु व एक एचपी प्रिन्टर बरामद।-थाना सेक्टर-24 नोएडा pic.twitter.com/tmOy1HeJ6H — POLICE COMMISSIONERATE GAUTAM BUDDH NAGAR (@noidapolice) March 6, 2022