alex Certify ತನ್ನ ಮೇಲಾದ ಲೈಂಗಿಕ ದೌರ್ಜನ್ಯದ ಕರಾಳ ಕಥೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಖ್ಯಾತ ನಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನ ಮೇಲಾದ ಲೈಂಗಿಕ ದೌರ್ಜನ್ಯದ ಕರಾಳ ಕಥೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಖ್ಯಾತ ನಟಿ

ಸ್ನಿಗ್ಧ ಚೆಲುವೆ ಭಾವನಾ ಮೆನನ್ ತಮಗಾದ ಕರಾಳ ದೌರ್ಜನ್ಯದ ಬಗ್ಗೆ ಮೊಟ್ಟ ಮೊದಲ ಬಾರಿ ಮಾತನಾಡಿದ್ದಾರೆ‌.‌ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಭಾವನಾ, ಹಿಂದಿನ ಘಟನೆಯ ಕರಾಳತೆಯನ್ನು ತೆರೆದಿಟ್ಟಿದ್ದಾರೆ.

2017ರಲ್ಲಿ ನಟಿಯನ್ನು ಕಿಡ್ನಾಪ್ ಮಾಡಿ ಲೈಂಗಿಕ ದೌರ್ಜನ್ಯ ಎಸಗಲಾಗಿತ್ತು. ಈ ಬಗ್ಗೆ ಮಾತನಾಡಿರುವ ಭಾವನಾ, ಆ ಭೀಕರ ಘಟನೆ ತನ್ನ ಜೀವನವನ್ನು ಹೇಗೆ ಬದಲಾಯಿಸಿತು ಎಂಬುದನ್ನ ಹಂಚಿಕೊಂಡಿದ್ದಾರೆ. ಆ ಘಟನೆ ತನಗೆ ದುಃಸ್ವಪ್ನದಂತೆ ಕಾಡುತ್ತದೆ ಎಂದಿದ್ದಾರೆ. ಆ ಘಟನೆಯ ನಂತರ, ನಾನು ಸಂಪೂರ್ಣ ಕುಸಿದು ಹೋದೆ, ನನ್ನ ಘನತೆಯನ್ನು ತುಂಡು ತುಂಡಾಗಿ ಚೂರು ಮಾಡಲಾಯಿತು ಎಂದು ಭಾವುಕರಾಗಿದ್ದಾರೆ.

ʼಕಚ್ಚಾ ಬಾದಾಮ್ʼ ಹಾಡಿಗೆ ಕುಣಿದ ಪಿ.ವಿ. ಸಿಂಧು; ಬ್ಯಾಡ್ಮಿಂಟನ್ ತಾರೆಯ ಕ್ಯೂಟ್ ವಿಡಿಯೋ ವೈರಲ್…!

ಆ ಒಂದು ಘಟನೆಯಿಂದ ನನ್ನ ಇಡೀ ಜೀವನ ತಲೆಕೆಳಗಾಗಿತ್ತು. ಅದು ನನ್ನ ಮನಸ್ಸಿನಲ್ಲಿ ನಿರಂತರವಾಗಿ ಕಾಡುತ್ತಿತ್ತು. ನನ್ನ ಪರಿಸ್ಥಿತಿ ಹೇಗಿತ್ತು ಎಂದರೆ, ನನ್ನೊಂದಿಗೆ ಹೀಗೆ ಏಕಾಯಿತು ಎಂದು ನನ್ನನ್ನು ನಾನೇ ಪ್ರಶ್ನಿಸಿಕೊಳ್ಳುತ್ತಿದ್ದೆ. ನಿರಂತರವಾಗಿ ನನ್ನನ್ನು ನಾನೇ ದೂಷಿಸಿಕೊಳ್ಳುತ್ತಿದ್ದೆ‌. ಎಷ್ಟೋ ಬಾರಿ ಹಿಂದಿನ ಸಮಯಕ್ಕೆ ಹಿಂತಿರುಗಿ, ಇಡೀ ಘಟನೆ ನಡೆಯದಂತೆ ನೋಡಿಕೊಳ್ಳಬೇಕು. ನನ್ನ ಜೀವನ ಮೊದಲಿನಂತೆ ಸಾಮಾನ್ಯವಾಗಬೇಕು ಎಂದು ತೀವ್ರವಾಗಿ ಬಯಸಿದ್ದೆ ಎಂದಿದ್ದಾರೆ.

ಈ ವೇಳೆ ತನ್ನ ಕಾನೂನು ಹೋರಾಟದ ಬಗ್ಗೆಯೂ ಮಾತನಾಡಿರುವ ಭಾವನಾ, ನನ್ನ ವಿಚಾರಣೆ 2020 ರಲ್ಲಿ ನಡೆಯಿತು, ನಾನು 15 ದಿನಗಳವರೆಗೆ ನ್ಯಾಯಾಲಯಕ್ಕೆ ಹೋಗಬೇಕಾಯಿತು. ನಾನು ನ್ಯಾಯಾಲಯದಲ್ಲಿದ್ದ ಆ 15 ದಿನಗಳು ನನಗೆ ಸಂಪೂರ್ಣವಾಗಿ ವಿಭಿನ್ನ ಮಟ್ಟದ ಆಘಾತಕಾರಿ ಅನುಭವ ನೀಡಿತು. ಆದರೆ ಆ ವಿಚಾರಣೆಗಳ ನಂತರ ಕೊನೆಯ ದಿನ ನ್ಯಾಯಾಲಯದಿಂದ ಹೊರಬಂದಾಗ ನಾನು ವಿಕ್ಟಿಮ್ ಅಲ್ಲಾ ಸರ್ವೈವರ್ ಎನ್ನುವ ಭಾವನೆ ಮೂಡಿತು ಎಂದು ತಿಳಿಸಿದ್ದಾರೆ.

ಈ ಹಿಂದೆ ಈ ಬಗ್ಗೆ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದ ಅವರು, ಇದು ಸುಲಭದ ಪ್ರಯಾಣವಲ್ಲ, ವಿಕ್ಟಿಮ್ ಮನಸ್ಥಿತಿಯಿಂದ ಇದನ್ನ ನಾನು ಎದುರಿಸಬಲ್ಲೆ ಎಂಬ ಧೈರ್ಯ ಒಗ್ಗೂಡಿಸಿಕೊಂಡ ಪ್ರಯಾಣ ಕಷ್ಟಕರವಾಗಿತ್ತು. ಈ ಘಟನೆ ನಡೆದು 5 ವರ್ಷಗಳಾಗಿದೆ. ಈವರೆಗೂ ನನ್ನ ಹೆಸರು ಮತ್ತು ನನ್ನ ಗುರುತನ್ನ ಹಲವು ಕಾರಣಗಳಿಂದ ಮುಚ್ಚಿಡಲಾಗಿದೆ.

ನಾನು ಯಾವುದೇ ಅಪರಾಧ ಮಾಡದಿದ್ದರು, ನನ್ನನ್ನು ಅವಮಾನಿಸುವ, ಮೌನವಾಗಿಸುವ, ಒಂಟಿಯಾಗಿಸುವ ಅನೇಕ ಪ್ರಯತ್ನಗಳು ನಡೆದಿವೆ. ಆದರೆ ಅಂತಹ ಸಮಯದಲ್ಲಿ, ನನ್ನ ಧ್ವನಿಯನ್ನು ತುಳಿಯಲು ಬಿಡದೆ, ನನ್ನ ಧ್ವನಿಗೆ ಧ್ವನಿಯಾಗಿ ನನ್ನ ಜೊತೆ ಕೆಲವರು ನಿಂತಿದ್ದಾರೆ. ಈಗ ಅನೇಕರು ನನ್ನ ಪರವಾಗಿ ಮಾತನಾಡುವುದನ್ನು ಕೇಳಿದಾಗ, ಈ ಹೋರಾಟದಲ್ಲಿ ನಾನು ಒಬ್ಬಂಟಿಯಾಗಿಲ್ಲ ಎಂದು ನನಗೆ ತಿಳಿದಿದೆ. ನ್ಯಾಯವು ಮೇಲುಗೈ ಸಾಧಿಸಲು, ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಲು ಮತ್ತು ಬೇರೆ ಯಾರೂ ಅಂತಹ ಅಗ್ನಿಪರೀಕ್ಷೆಗೆ ಒಳಗಾಗದಂತೆ ನೋಡಿಕೊಳ್ಳಲು, ನಾನು ಈ ಪ್ರಯಾಣವನ್ನು ಮುಂದುವರಿಸುತ್ತೇನೆ. ನನ್ನೊಂದಿಗೆ ನಿಂತಿರುವ ಎಲ್ಲರಿಗೂ ಪ್ರೀತಿಗೆ ಹೃತ್ಪೂರ್ವಕ ಧನ್ಯವಾದಗಳು ಎಂದು ಬರೆದುಕೊಂಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...