ವೈದ್ಯ ದಂಪತಿಗಳಿಬ್ಬರು ಉತ್ತರ ಪ್ರದೇಶದ ಶಾಮ್ಲಿಯಿಂದ ಡೆಹ್ರಾಡೂನ್ಗೆ ತೆರಳುತ್ತಿದ್ದರು. ದಾರಿ ಮಧ್ಯದಲ್ಲಿ ಅದೇನಾಯಿತು ಏನೋ, ಉಪಾಹಾರಕ್ಕೆಂದು ನಿಲ್ಲಿಸಿದ್ದ ಸ್ಥಳದಲ್ಲೆ ಪತಿ, ತನ್ನ ಪತ್ನಿಯ ಎದುರೇ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಉತ್ತರ ಪ್ರದೇಶದ ವೈದ್ಯ 60 ವರ್ಷದ ಆರ್.ಪಿ.ಸಿಂಗ್ ತಮ್ಮನ್ನು ತಾವೇ ಕೊಂದುಕೊಂಡಿದ್ದಾರೆ ಎಂದು ಟಿಒಐ ವರದಿ ಮಾಡಿದೆ. ಡಾ.ಆರ್.ಪಿ. ಸಿಂಗ್ ಅವರು ತಮ್ಮ ಪತ್ನಿ ಡಾ. ಅಲ್ಕಾ ಸಿಂಗ್ ಅವರೊಂದಿಗೆ ಡೆಹ್ರಾಡೂನ್ನಲ್ಲಿರುವ ತಮ್ಮ ಮನೆಗೆ ಆಗಾಗ್ಗೆ ಹೋಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ರೈತ ಮಹಿಳೆಯರು; ತೀವ್ರ ಅಸ್ವಸ್ಥ
ಶನಿವಾರದಂದು, ಇಬ್ಬರೂ ವಾರಾಂತ್ಯವನ್ನು ಕಳೆಯಲು ಡೆಹ್ರಾಡೂನ್ಗೆ ಹೋಗುತ್ತಿದ್ದರು. ಆಗ ಅವರು ಉಪಾಹಾರ ಸೇವಿಸಲು ರೆಸ್ಟೋರೆಂಟ್ ಒಂದರ ಬಳಿ ನಿಲ್ಲಿಸಿದರು. ಸಿಂಗ್ ಅವರ ಪತ್ನಿ ವಾಶ್ ರೂಂಗೆ ಹೋದರು. ಅವರು ಹಿಂತಿರುಗಿ ಬಂದಾಗ, ಇಬ್ಬರೂ ಸ್ವಲ್ಪ ಚರ್ಚೆ ಕೂಡ ನಡೆಸಿದರು. ಈ ವೇಳೆ ದಂಪತಿಗಳು ಆಗಾಗ ಕಾರಿನ ಬಳಿಗೆ ಹೋಗುವುದು, ಕಾರಿನೊಳಗೆ ಕೂರುವುದು, ಇಳಿಯುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಎಂದಿರುವ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸರ್ಕಲ್ ಆಫೀಸರ್ (ಸದರ್) ಅಜೇಂದ್ರ ಯಾದವ್ ಮಾಹಿತಿ ನೀಡಿದ್ದಾರೆ.
ಘಟನೆಗೂ ಮುನ್ನ ವೈದ್ಯ ಸಿಂಗ್ ಅವರಿಗೆ ಕೆಲವು ಕರೆಗಳು ಬಂದಿದ್ದು, ಆಕ್ರೋಶಗೊಂಡಿದ್ದರು. ಸಿಂಗ್ ಅವರು ಇಷ್ಟು ದೊಡ್ಡ ನಿರ್ಧಾರ ಏಕೆ ಕೈಗೊಂಡರು ಎಂಬ ಕಾರಣವನ್ನು ಅರ್ಥಮಾಡಿಕೊಳ್ಳಲು ತನಗೆ ಸಾಧ್ಯವಾಗುತ್ತಿಲ್ಲ, ಅವರು ನನಗೆ ಹುಷಾರಿಲ್ಲ ಎಂದು ಹೇಳಿದ್ದರೆಂದು ಮೃತರ ಪತ್ನಿ ಹೇಳಿಕೆ ನೀಡಿದ್ದಾರೆ. ಸಿಂಗ್ ಅವರು ತಮ್ಮನ್ನು ತಾವು ಶೂಟ್ ಮಾಡಿಕೊಳ್ಳುವ ಸಂದರ್ಭದಲ್ಲಿ ಅವರ ಹೆಂಡತಿ ಕೆಲವು ಮೀಟರ್ ದೂರದಲ್ಲಿ ನಿಂತಿದ್ದರು ಎಂದು ಸಹರಾನ್ಪುರದ ಎಸ್ಎಸ್ಪಿ ತಿಳಿಸಿದ್ದಾರೆ.