ದೆಹಲಿ ಅತ್ಯಾಚಾರದ ಕುರಿತಾದ ಟ್ವೀಟ್ ವಿವಾದಕ್ಕೊಳಗಾದ ಬಳಿಕ ರಾಹುಲ್ ಗಾಂಧಿ ಬರೋಬ್ಬರಿ ಐದು ತಿಂಗಳುಗಳ ಕಾಲ ಟ್ವಿಟರ್ನಲ್ಲಿ ಫಾಲೋವರ್ಸ್ನ್ನು ಕಳೆದುಕೊಂಡಿದ್ದಾರೆ. ಆದರೆ ಇದೀಗ ರಾಹುಲ್ ಗಾಂಧಿಗೆ ವಾರಕ್ಕೆ ಸುಮಾರು 80 ಸಾವಿರ ದರದಲ್ಲಿ ಫಾಲೋವರ್ಸ್ ಸಂಖ್ಯೆ ಹೆಚ್ಚುತ್ತಿದೆ.
ತಮ್ಮ ಫಾಲೋವರ್ಸ್ ಸಂಖ್ಯೆ ಇಳಿಕೆಯಾದ ಬಗ್ಗೆ ಆಕ್ರೋಶ ಹೊರಹಾಕಿದ್ದ ರಾಹುಲ್ ಗಾಂಧಿ ಇದು ಮೋದಿ ಸರ್ಕಾರದ ರಾಜಕೀಯ ಒತ್ತಡದ ಪರಿಣಾಮವಾಗಿದೆ ಎಂದು ಡಿಸೆಂಬರ್ 27ರಂದು ಆರೋಪಿಸಿದ್ದರು. ಜನವರಿ 12ರಿಂದ ಆರು ವಾರಗಳಲ್ಲಿ ರಾಹುಲ್ ಸತತವಾಗಿ ವಾರದಲ್ಲಿ 80 ಸಾವಿರ ಫಾಲೋವರ್ಸ್ನ್ನು ಸಂಪಾದಿಸುತ್ತಿದ್ದಾರೆ. ಈ ಮೂಲಕ ರಾಹುಲ್ ಗಾಂಧಿ ಪಾಲೋವರ್ಸ್ ಸಂಖ್ಯೆ 20 ಮಿಲಿಯನ್ ಆಗಿದೆ.
ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ರಾಹುಲ್ ಗಾಂಧಿ ದೆಹಲಿಯಲ್ಲಿ ಅತ್ಯಾಚಾರಕ್ಕೊಳಗಾಗಿದ್ದ ಸಂತ್ರಸ್ತೆಯ ಕುಟುಂಬದ ಫೋಟೋವನ್ನು ಪೋಸ್ಟ್ ಮಾಡಿದ ಬಳಿಕ ಅವರ ಖಾತೆಯು ವಿವಾದಕ್ಕೆ ಒಳಗಾಯಿತು. ಬಿಜೆಪಿ ಸದಸ್ಯರ ದೂರಿನ ಬಳಿಕ ಟ್ವಿಟರ್ ಸುಮಾರು 8 ದಿನಗಳ ಕಾಲ ರಾಹುಲ್ ಖಾತೆಯನ್ನು ಲಾಕ್ ಮಾಡಿತ್ತು. ತಮ್ಮ ಹೊಸ ಖಾತೆಯಲ್ಲಿ ಫಾಲೋವರ್ ಪಡೆಯುವುದನ್ನು ನಿಲ್ಲಿಸಲಾಗಿದೆ ಎಂದು ರಾಹುಲ್ ಟ್ವಿಟರ್ ಸಿಇಓ ಪರಾಗ್ ಅಗರ್ವಾಲ್ಗೆ ದೂರು ನೀಡಿದ್ದರು.