alex Certify ಆಯುಷ್​ ಬೆಂಬಲಿತ ಆರ್ಯುವೇದಿಕ್​ ಗಿಡಮೂಲಿಕೆಯಿಂದ ಯಕೃತ್ತಿನ ಮೇಲೆ ಹಾನಿ: ಅಧ್ಯಯನದಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಯುಷ್​ ಬೆಂಬಲಿತ ಆರ್ಯುವೇದಿಕ್​ ಗಿಡಮೂಲಿಕೆಯಿಂದ ಯಕೃತ್ತಿನ ಮೇಲೆ ಹಾನಿ: ಅಧ್ಯಯನದಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ

ಕೇಂದ್ರ ಆಯುಷ್‌ ಇಲಾಖೆಯ ಎಲ್ಲಾ ಗಿಡಮೂಲಿಕೆಗಳ ಪ್ರಚಾರವೂ ಒಳ್ಳೆಯದು ಎಂದು ಕಾಣುತ್ತಿಲ್ಲ. ಈ ಮಾತಿಗೆ ಪುಷ್ಠಿ ಎಂಬಂತೆ ಗಿಲೋಯ್​ ಎಂಬ ಆಯುರ್ವೇದ ಗಿಡಮೂಲಿಕೆಯಿಂದ ಬಹುತೇಕ ಜನರಿಗೆ ಪಿತ್ತಜನಕಾಂಗದ ಮೇಲೆ ಹಾನಿ ಉಂಟಾಗಿರುವ ಬಗ್ಗೆ ವರದಿಯಾಗಿದೆ. ಕೋವಿಡ್​ 19 ವಿರುದ್ಧ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಗಿಲೋಯ್​ ಸೇವಿಸಿ ಎಂದು ಹೇಳಲಾಗಿತ್ತು.

ಮಲ್ಟಿ ಸೆಂಟರ್​​ನ ಅಧ್ಯಯನದಲ್ಲಿ 12 ನಗರಗಳ ವೈದ್ಯರು ಗಿಲೋಯ್​(ಗಿಡುಚಿ)ಯು ಕನಿಷ್ಟ 43 ಮಂದಿಯಲ್ಲಿ ಪಿತ್ತಜನಕಾಂಗದ ಸಮಸ್ಯೆಯನ್ನು ವರದಿ ಮಾಡಿದೆ. ಮುಂಬೈನಲ್ಲಿ ಮತ್ತೊಂದು ಗುಂಪಿನ ವೈದ್ಯರು ಆರು ಮಂದಿಯಲ್ಲಿ ಈ ಸಮಸ್ಯೆಯನ್ನು ಗುರುತಿಸಿದ್ದಾರೆ.

ಕೇಂದ್ರ ಆಯುರ್ವೇದ, ಯುನಾನಿ, ಸಿದ್ಧ ಹಾಗೂ ಹೋಮಿಯೋಪತಿ ಕಳೆದ 9 ತಿಂಗಳಲ್ಲಿ ಗಿಲೋಯ್​ ಸುರಕ್ಷಿತವಾಗಿದೆ ಎಂದು ಮೂರು ಸುದ್ದಿಗೋಷ್ಠಿಗಳ ಮೂಲಕ ಮಾಹಿತಿ ನೀಡಿದೆ. ಗಿಲೋಯ್​ನ ಮಿತಿಮೀರಿದ ಪ್ರಮಾಣವು ಅಪಾಯಕಾರಿಯಾಗಿದೆ.

ಗಿಲೋಯ್​ ಆಟೋ ಇಮ್ಯೂನ್​ ತರಹದ ಯಕೃತ್ತಿನ ಗಾಯವನ್ನು ಉಂಟು ಮಾಡುತ್ತದೆ. ಇದೊಂದು ವಿಲಕ್ಷಣವಾದ ಪಿತ್ತಜನಕಾಂಗದ ಗಾಯವಾಗಿದೆ. ಇದು ಕೇವಲ ಓವರ್​ಡೋಸ್​ನಿಂದ ಮಾತ್ರ ಉಂಟಾಗುವಂತಹ ಗಾಯ ಕೂಡ ಅಲ್ಲ ಎಂದು ರಾಜಗಿರಿ ಆಸ್ಪತ್ರೆಯ ಯಕೃತ್ತು ತಜ್ಞ ಮಾಹಿತಿ ನೀಡಿದರು.

ಇದೊಂದು ಅಪಾಯಕಾರಿ ಗಿಡಮೂಲಿಕೆಯಾಗಿದೆ. ಹೈಪೋಥೈರಾಯ್ಡ್​, ಮಧುಮೇಹ, ಲೂಪಸ್​ ಹಾಗೂ ಸಂಧಿವಾತವನ್ನು ಹೊಂದಿದವರಿಗೆ ಗಿಲೋಯ್​ ಸ್ವೀಕರಿಸದಂತೆ ಎಚ್ಚರಿಕೆ ನೀಡಬೇಕು. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಕೆಟ್ಟದಾಗಿ ಸಕ್ರಿಯಗೊಳಿಸಬಹುದು ಅಥವಾ ಅಧನ್ನು ಮಾರ್ಪಾಡು ಮಾಡಬಹುದು ಎಂದು ಅವರು ಹೇಳಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...