alex Certify ‘ವೋ ಲಡ್ಕಿ ಹೈ ಕಹಾನ್’ ಹಾಡಿಗೆ ವರ – ತಾಯಿಯ ಬಿಂದಾಸ್ ಕುಣಿತ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ವೋ ಲಡ್ಕಿ ಹೈ ಕಹಾನ್’ ಹಾಡಿಗೆ ವರ – ತಾಯಿಯ ಬಿಂದಾಸ್ ಕುಣಿತ…..!

Watch: Groom, Mother-In-Law Surprises Bride By Dancing To 'Woh Ladki Hai Kahan' Song From Dil Chahta Haiಇತ್ತೀಚೆಗೆ ಭಾರತೀಯ ಮದುವೆಗಳಲ್ಲಿ ನೃತ್ಯ, ಹಾಡು ಇಲ್ಲದಿದ್ರೆ ವಿವಾಹವೇ ಅಪೂರ್ಣವೆಂದೆನಿಸಿಬಿಡುತ್ತದೆ ಅನ್ನೋ ಹಾಗಾಗಿದೆ. ವಿವಾಹ ಸಮಾರಂಭ ಅಂದ್ರೆ ಮೋಜು-ಮಸ್ತಿ ಇರಲೇಬೇಕು. ಪ್ರತಿದಿನ ಇಂತಹ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುತ್ತದೆ.

ವರನಿಗಾಗಿ ವಧು ನೃತ್ಯ ಮಾಡಿದ್ರೆ, ವಧುವಿಗಾಗಿ ವರನಿಂದ ಡಾನ್ಸ್ ಅಥವಾ ಇಬ್ಬರೂ ಸೇರಿ ನೃತ್ಯ ಮಾಡುವುದು ಮುಂತಾದ ವಿಡಿಯೋಗಳನ್ನು ನೀವು ನೋಡಿರ್ತೀರಾ. ಆದ್ರೀಗ ವರ ಹಾಗೂ ಆತನ ತಾಯಿ ನೃತ್ಯ ಮಾಡಿರೋ ಮುದ್ದಾದ ವಿಡಿಯೋ ವೈರಲ್ ಆಗಿದೆ.

ʼದಿಲ್ ಚಾಹ್ತಾ ಹೈʼ ಚಿತ್ರದ ವೋ ಲಡ್ಕಿ ಹೈ ಕಹಾನ್ ಹಾಡಿಗೆ ವರ ಹಾಗೂ ಆತನ ತಾಯಿ ಹೆಜ್ಜೆ ಹಾಕಿದ್ದು, ವೇದಿಕೆ ಮೇಲೆ ಚಿಂದಿ ಉಡಾಯಿಸಿದ್ದಾರೆ. ವರ ಕಪ್ಪು ಬಣ್ಣದ ಟುಕ್ಸೆಡೊ ಧರಿಸಿದ್ದರೆ, ವಧುವಿನ ಅತ್ತೆ ಮಿನುಗುತ್ತಿರುವ ಕಪ್ಪು ಬಣ್ಣದ ಲೆಹೆಂಗಾ ಧರಿಸಿ ಮಿಂಚಿದ್ದಾರೆ. ವೇದಿಕೆ ಮೇಲೆ ವರ ಹಾಗೂ ವಧುವಿನ ಅತ್ತೆ ನೃತ್ಯ ಮಾಡುವ ಮೂಲಕ ಆಕೆಯನ್ನು ಅಚ್ಚರಿಗೊಳಿಸಿದ್ದಾರೆ.

ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ವರ ಹಾಗೂ ಆತನ ತಾಯಿ ಪರಸ್ಪರ ತೋಳು ಹಿಡಿದು ವೇದಿಕೆಯಲ್ಲಿ ಸುಂದರವಾಗಿ ಹೆಜ್ಜೆ ಹಾಕಿದ್ದಾರೆ. ನೆರೆದಿದ್ದ ಅತಿಥಿಗಳು ತಾಯಿ-ಮಗನ ನೃತ್ಯ ನೋಡಿ ಖುಷಿಪಟ್ಟಿದ್ದಾರೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ 8.1 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...