ವೋಲ್ವೋದ ಉಪ ಬ್ರಾಂಡ್ ಪೋಲ್ ಸ್ಟಾರ್ ಅತ್ಯುತ್ತಮ ಗುಣಮಟ್ಟದ ಎಲೆಕ್ಟ್ರಿಕ್ ಕಾರನ್ನು ಅಭಿವೃದ್ಧಿಪಡಿಸಿದೆ. O2 EV, ರೋಡ್‌ಸ್ಟರ್ ಪರಿಕಲ್ಪನೆಯಿರುವ ಹಾರ್ಡ್‌ಟಾಪ್ ಕನ್ವರ್ಟಿಬಲ್ ಸ್ಪೋರ್ಟ್ಸ್ ಕಾರ್. 2024 ಪೋಲ್ ಸ್ಟಾರ್ 5 ನಿಂದ ಇದು ಸ್ಪೂರ್ತಿ ಪಡೆದಿದೆ. ಹಾಗಾಗಿ O2 EV ಉತ್ಪಾದನೆಗೆ ಇನ್ನಷ್ಟು ಒತ್ತುಕೊಡೋದಾಗಿ ಪೋಲ್‌ಸ್ಟಾರ್ ಮುಖ್ಯಸ್ಥ ಥಾಮಸ್ ಇಂಗೆನ್ಲಾತ್ ಹೇಳಿದ್ದಾರೆ.
ಉದ್ದ ಕಡಿಮೆ, ಅಗಲವಾದ ದೇಹ, 2+2 ಕ್ಯಾಬಿನ್ ವಿನ್ಯಾಸ, ಮಿನಿಮಲ್ ಓವರ್‌ಹ್ಯಾಂಗ್‌ಗಳು ಮತ್ತು ಉದ್ದವಾದ ವೀಲ್‌ಬೇಸ್ ಈ ಕಾರಿನ ವಿಶೇಷತೆ. ಇದೊಂದು ಕ್ಲಾಸಿಕ್ ಸ್ಪೋರ್ಟ್ಸ್ ಕಾರ್ ಎಂಬುದರಲ್ಲಿ ಅನುಮಾನವೇ ಇಲ್ಲ. ಕಾರಿನ ಹಿಂದೆ ಏರ್ ಬ್ಲೇಡ್‌ಗಳಾಗಿ ಕಾರ್ಯನಿರ್ವಹಿಸುವ ಹಿಂಭಾಗದ ದೀಪಗಳು ಈ ಕಾರಿನಲ್ಲಿವೆ. ಇದರ ಸಹಾಯದಿಂದ ವಾಹನವು ತನ್ನ ವ್ಯಾಪ್ತಿಯನ್ನು ಗರಿಷ್ಠಗೊಳಿಸಬಹುದು.
ಪೋಲೆಸ್ಟಾರ್ O2 ಕಾರಿನ ಹಿಂದಿನ ಆಸನಗಳ ಹಿಂದೆ ಆಟೊನೊಮಸ್ ಸಿನೆಮಾಟಿಕ್ ಡ್ರೋನ್ ಇದೆ. ಏರೋಫುಜಿಯಾದ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್, ಹೋಕೊ ಫ್ಲೋ ಸಹಯೋಗದೊಂದಿಗೆ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಚಾಲನಾ ಅನುಕ್ರಮವನ್ನು ಈ ಡ್ರೋನ್ ರೆಕಾರ್ಡ್ ಮಾಡುತ್ತದೆ. ಟೈಟ್ ಬಾಡಿ ಕಂಟ್ರೋಲ್, ಅಲ್ಯೂಮಿನಿಯಂ ಪ್ಲಾಟ್ ಫಾರಂ ಹೊಂದಿರೋ ಪೋಲ್ ಸ್ಟಾರ್ ಎಲೆಕ್ಟ್ರಿಕ್ ಕಾರು ಬ್ರಿಟನ್ ನಲ್ಲಿ ತಯಾರಾಗಿದೆ.