ಕೀವ್: ಉಕ್ರೇನ್ ಹಾಗೂ ರಷ್ಯಾ ಭೀಕರ ಸಮರ ಮುಂದುವರೆದಿದ್ದು, 11 ದಿನಗಳ ಯುದ್ಧದಲ್ಲಿ ಈವರೆಗೆ ರಷ್ಯಾದ 10,000 ಸೈನಿಕರನ್ನು ಸದೆಬಡಿದಿರುವುದಾಗಿ ಉಕ್ರೇನ್ ತಿಳಿಸಿದೆ.
ರಷ್ಯಾದ 269 ಯುದ್ಧ ಟ್ಯಾಂಕರ್, 945 ಶಸ್ತ್ರಸಜ್ಜಿತ ಯುದ್ಧ ವಾಹನ, 105 ಆರ್ಟಲರಿ ಸಿಸ್ಟಮ್, 50 ಎಂಎಲ್ ಆರ್, 19 ಏರ್ ಡಿಫೆನ್ಸ್, 30 ಯುದ್ಧ ವಿಮಾನ, 40 ಹೆಲಿಕಾಪ್ಟರ್, 409 ಯುನಿಟ್ಸ್ ಆಫ್ ಮೋಟರ್ ವೆಹಿಕಲ್, 60 ಆಯಿಲ್ ಟ್ಯಾಂಕ್ ಗಳನ್ನು ನಾಶ ಪಡಿಸಿದ್ದಾಗಿ ಉಕ್ರೇನ್ ಸರ್ಕಾರ ತಿಳಿಸಿದೆ.
ಉಕ್ರೇನ್ ಹೇಳಿಕೆ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ರಷ್ಯಾ, ಉಕ್ರೇನ್ ನ 2037 ಮಿಲಿಟರಿ ಉಪಕರಣ, 71 ಕಮಾಂಡ್ ಪೋಸ್ಟ್, 748 ಯುದ್ಧ ಟ್ಯಾಂಕರ್, 90 ಯುದ್ಧ ವಿಮಾನಗಳು, ಉಕ್ರೇನ್ ಕಮ್ಯುನಿಕೇಷನ್ ಸೆಂಟರ್, 98 S-300, 1 ಆಂಟಿ ಏರ್ ಮಿಷಲ್, 108 ಏರ್ ಡಿಫೆನ್ಸ್ ಮಷಿನ್, 61 ರಡಾರ್ ಸ್ಟೇಷನ್, 1 Buk M ಧ್ವಂಸಗೊಳಿಸಿರುವುದಾಗಿ ತಿಳಿಸಿದೆ.