ಭಾರತೀಯ ನೌಕಾಪಡೆಯು ಸುಧಾರಿತ ಬ್ರಹ್ಮೋಸ್ ಕ್ಷಿಪಣಿಯ ಯಶಸ್ವಿ ಪರೀಕ್ಷೆ 05-03-2022 5:57PM IST / No Comments / Posted In: India, Featured News, Live News ಭಾರತೀಯ ನೌಕಾಪಡೆಯು ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಯ ದೀರ್ಘ ಶ್ರೇಣಿಯ ಆವೃತ್ತಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಈ ಸಂಬಂಧ ಟ್ವಿಟರ್ನಲ್ಲಿ ಮಾಹಿತಿ ನೀಡಿರುವ ನೌಕಾಪಡೆಯು ಬ್ರಹ್ಮೋಸ್ ಕ್ಷಿಪಣಿಯ ಸುಧಾರಿತ ಆವೃತ್ತಿಯ ಆವೃತ್ತಿಯ ದೀರ್ಘ ಶ್ರೇಣಿ ನಿಖರ ದಾಳಿ ಸಾಮರ್ಥ್ಯವನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ ಎಂದು ಮಾಹಿತಿ ನೀಡಿದೆ. ಬ್ರಹ್ಮೋಸ್ ಕ್ಷಿಪಣಿಯ ಸುಧಾರಿತ ಆವೃತ್ತಿಯ ದೀರ್ಘ-ಶ್ರೇಣಿಯ ನಿಖರವಾದ ಸ್ಟ್ರೈಕ್ ಸಾಮರ್ಥ್ಯವನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ನಿಗದಿಪಡಿಸಲಾದ ಗುರಿಯ ನಾಶ ಹಾಗೂ ಫ್ರಂಟ್ಲೈನ್ ವೇದಿಕೆಗಳ ಕಾರ್ಯಾಚರಣೆಯ ಸಿದ್ಧತೆಯನ್ನು ಪ್ರದರ್ಶಿಸಿದೆ ಎಂದು ಟ್ವೀಟ್ನಲ್ಲಿ ಮಾಹಿತಿ ನೀಡಲಾಗಿದೆ. ಈ ಯಶಸ್ವಿ ಪರೀಕ್ಷೆಯು ಭಾರತೀಯ ನೌಕಾಪಡೆಯ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಭಾರತೀಯ ನೌಕಾಪಡೆಯು ಹೇಳಿದೆ. ಇದು ಆತ್ಮ ನಿರ್ಭರ್ ಭಾರತ್ ಹಾಗೂ ಮೇಕ್ ಇನ್ ಇಂಡಿಯಾಗೆ ಭಾರತೀಯ ನೌಕಾಪಡೆಯ ಮಹತ್ವದ ಕೊಡುಗೆಯಾಗಿದೆ. Long range precision strike capability of Adv version of #BrahMos missile successfully validated.Pin point destruction of tgt demonstrated combat & mission readiness of frontline platforms.Yet another shot in the arm for #AatmaNirbharBharat#IndianNavy #CombatReady & #Credible pic.twitter.com/NKl3GoHwbB — SpokespersonNavy (@indiannavy) March 5, 2022