ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ದೌರಾಲಾ ನಿಲ್ದಾಣದಲ್ಲಿ ನಿಂತಿದ್ದ ರೈಲಿಗೆ ಏಕಾಏಕಿ ಬೆಂಕಿ ಬಿದ್ದಿದೆ. ಶನಿವಾರದಂದು ಈ ಘಟನೆ ನಡೆದಿದ್ದು, ಸಹರಾನ್ಪುರ-ದೆಹಲಿ ಪ್ಯಾಸೆಂಜರ್ ರೈಲಿನ ಇಂಜಿನ್ ಮತ್ತು ಎರಡು ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಬೆಂಕಿ ಕಾಣಿಸಿಕೊಂಡ ತಕ್ಷಣ ಎಚ್ಚರಗೊಂಡ ಪ್ರಯಾಣಿಕರು, ಉಳಿದ ಕಂಪಾರ್ಟ್ಮೆಂಟ್ಗಳನ್ನು ಬೆಂಕಿ ಹತ್ತಿಕೊಂಡ ಎಂಜಿನ್ನಿಂದ ಮತ್ತು ಎರಡು ಬೋಗಿಗಳಿಂದ ಬೇರ್ಪಡಿಸುವ ಪ್ರಯತ್ನದಲ್ಲಿ ರೈಲನ್ನು ತಳ್ಳುತ್ತಿರುವ ವಿಡಿಯೋ ಲಭ್ಯವಾಗಿದೆ.
ಭಾರತದ ಗೋಧಿ ಉತ್ತಮವಾಗಿದೆ, ಪಾಕಿಸ್ತಾನದ ಗೋಧಿ ತಿನ್ನಲು ಯೋಗ್ಯವಲ್ಲ ಎಂದ ತಾಲಿಬಾನ್ ಅಧಿಕಾರಿ…!
ಹಲವಾರು ಪ್ರಯಾಣಿಕರು, ರೈಲ್ವೇ ನಿಲ್ದಾಣದ ಸಿಬ್ಬಂದಿಯೊಂದಿಗೆ ಬೆಂಕಿಯ ಹರಡುವಿಕೆಯನ್ನು ತಡೆಗಟ್ಟಲು ಮತ್ತು ದುರಂತವನ್ನು ತಪ್ಪಿಸುವ ಸಲುವಾಗಿ ಉರಿಯುತ್ತಿರುವ ಬೋಗಿಗಳು ಮತ್ತು ಎಂಜಿನ್ನಿಂದ ರೈಲನ್ನು ದೂರ ತಳ್ಳುತ್ತಿರುವುದನ್ನು ವೀಡಿಯೊದಲ್ಲಿ ನೋಡಬಹುದು.
ನಂತರ ಅಗ್ನಿಶಾಮಕ ದಳದವರು ದೌರಾಲಾ ನಿಲ್ದಾಣಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಮಾತನಾಡಿರುವ ಅಧಿಕಾರಿಗಳು, ಘಟನೆಯಿಂದ ರೈಲು ಸಂಚಾರವನ್ನು ಸ್ವಲ್ಪ ಸಮಯದವರೆಗೆ ಅಡ್ಡಿಪಡಿಸಲಾಯಿತು. ಘಟನೆಯಲ್ಲಿ ಯಾವುದೇ ಗಾಯಗಳು ಅಥವಾ ಸಾವು ನೋವುಗಳು ವರದಿಯಾಗಿಲ್ಲ. ಬೆಂಕಿ ಹಿಡಿಯಲು ಕಾರಣವೇನು ಎಂದು ಇನ್ನು ತಿಳಿದು ಬಂದಿಲ್ಲಾ ಎಂದಿದ್ದಾರೆ.